ಧಾರವಾಡ: ಆಸ್ಪತ್ರೆಯ ನರ್ಸ್ ಮಾಡಿದ ಯಡವಟ್ಟಿನಿಂದ ಮಗುವಿನ ಮುಖ ಸುಟ್ಟು, ವಿಕಾರವಾಗಿದೆ. ನಗರದ ತಾವರಗೇರಿ ನರ್ಸಿಂಗ್ ಹೋಂ ನಲ್ಲಿ ಈ ಘಟನೆ ನಡೆದಿದೆ. 

ಆಗಿದ್ದೇನು?

ನೆಬುಲೈಸೇಷನ್ ಮಾಡುವಾಗ ನರ್ಸ್ ನಿರ್ಲಕ್ಷ್ಯದಿಂದ ಮಗುವಿನ ಮುಖವೇ ಸುಟ್ಟು ಹೋಗಿದೆ. ವಿಪರೀತ ಕಫದಿಂದ ಬಳಲುತ್ತಿದ್ದ ಮಗುವನ್ನು ನೆಬುಲೈಸೇಷನ್ ಮಾಡಲು ಆಸ್ಪತ್ರೆಗೆ ಕರೆ ತರಲಾಗಿತ್ತು. ಈ ಮಗುವಿಗೆ ಚಿಕಿತ್ಸೆ ನೀಡುವಾಗ, ಹುಷಾರಾಗಿರಬೇಕಾದ ನರ್ಸ್, ಗಮನ ಬೇರೆಡೆಗೆ ಹರಿಸಿದ್ದದಿಂದ ಈ ಅನಾಹುತ ಸಂಭವಿಸಿದೆ.

ಹತ್ತು ತಿಂಗಳ ಮಗು ಲಾವಣ್ಯ ನಗರದ ಗೊಲ್ಲರ ಕಾಲನಿಯ ನಾಗೇಶ-ಅಂಜಲಿ ದಂಪತಿಯ ಪುತ್ರಿ. ಮೂರು ದಿನಗಳ ಹಿಂದೆ ನಡೆದ ಈ ಘಟನೆ ಇದೀಗ ಬೆಳಕಿಗೆ ಬಂದಿದೆ.