ಶಾಲೆಗೆ ವಾಟರ್ ಸಪ್ಲೈ ಮಾಡುತ್ತಿದ್ದ ಮಂಜುನಾಥ ಎಂಬಾತನೊಂದಿಗೆ ಸ್ನೇಹ ಬೆಳೆಸಿದ್ದ ಕೃಷ್ಣನ ಪತ್ನಿ ರಾಧ, ಕಳೆದ ಅಕ್ಟೋಬರ್​ 19ರಂದು  ಗಂಡನನ್ನ ಕೊಲೆ ಮಾಡಿಸಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದಿದ್ದಳು.

ಮೈಸೂರು(ನ.11): ವರ್ಷದ ಹಿಂದೆ ಮೈಸೂರಿನಲ್ಲಿ ನಡೆದ ಖಾಸಗಿ ಶಾಲೆ ಮುಖ್ಯಸ್ಥನ ಕೊಲೆ ಪ್ರಕರಣಕ್ಕೆ ಇದೀಗ ರೋಚಕ ಟ್ವಿಸ್ಟ್ ಸಿಕ್ಕಿದೆ.

ಮೈಸೂರಿನ ಕನಕದಾಸನಗರ ಚಾಣಕ್ಯ ಶಾಲೆಯ ಮಾಲೀಕ ಕೃಷ್ಣ ಎಂಬಾತನನ್ನು, ಪ್ರಿಯಕರನೊಂದಿಗೆ ಸೇರಿ, ಆತನ ಪತ್ನಿ ರಾಧಾಳೆ ಕೊಲೆ ಮಾಡಿಸಿದ್ದಾಳೆ ಎಂಬ ಬೆಚ್ಚಿ ಬೀಳಿಸುವ ಸಂಗತಿ ಇದೀಗ ಹೊರ ಬಿದ್ದಿದೆ. ಶಾಲೆಗೆ ವಾಟರ್ ಸಪ್ಲೈ ಮಾಡುತ್ತಿದ್ದ ಮಂಜುನಾಥ ಎಂಬಾತನೊಂದಿಗೆ ಸ್ನೇಹ ಬೆಳೆಸಿದ್ದ ಕೃಷ್ಣನ ಪತ್ನಿ ರಾಧ, ಕಳೆದ ಅಕ್ಟೋಬರ್​ 19ರಂದು ಗಂಡನನ್ನ ಕೊಲೆ ಮಾಡಿಸಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದಿದ್ದಳು. ಬಳಿಕ ಸಾಕ್ಷಿ ನಾಶ ಪಡಿಸಲು, ಶವವನ್ನು ಸುಟ್ಟು ಅಂತ್ಯ ಸಂಸ್ಕಾರವನ್ನೂ ಸಹ ಮಾಡಿಸಿದ್ದಳು. ಬಳಿಕ ಯಾವುದೇ ಅನುಮಾನ ಬಾರದ ಹಾಗೇ ಪ್ರಿಯಕರನೊಂದಿಗೆ ಹಾಯಾಗಿದ್ದಳು.

ಇದೀಗ ರಾಧಾ ಬಳಿ ಇದ್ದ ಆಸ್ತಿ ಪಾಸ್ತಿಗಾಗಿ ಮಂಜುನಾಥ ಬ್ಲಾಕ್​'ಮೇಲ್ ಮಾಡುತ್ತಿದ್ದ. ಇದರಿಂದ ಬೇಸತ್ತ ರಾಧಾ ಮಂಜುನಾಥನ ವಿರುದ್ಧ ಕುವೆಂಪುನಗರ ಪೊಲೀಸರಿಗೆ ದೂರು ನೀಡಿದ್ದಾಳೆ. ಆಗ ಮಂಜುನಾಥನನ್ನ ವಿಚಾರಣೆಗೊಳಪಡಿಸಿದ ಪೊಲೀಸರಿಗೆ, ರಾಧಾಳ ಪತಿ, ಖಾಸಗಿ ಶಾಲೆಯ ಮುಖ್ಯಸ್ಥ ಕೃಷ್ಣನ ಕೊಲೆ ರಹಸ್ಯವೂ ಗೊತ್ತಾಗಿದೆ. ಆರೋಪಿ ರಾಧಳನ್ನು ಬಂಧಿಸುತ್ತೇವೆ ಎಂದು ನಗರ ಪೊಲೀಸ್ ಆಯುಕ್ತ ಸುಬ್ರಮಣ್ಯೇಶ್ವರ ರಾವ್ ಹೇಳಿದ್ದಾರೆ.