Asianet Suvarna News Asianet Suvarna News

ಕರುನಾಡಿಗೆ ಸಿಕ್ಕಿತು ಹೊಸ ನಾಡ ಧ್ವಜ

ಕೆಂಪು, ಹಳದಿಯೊಂದಿಗೆ ಬಿಳಿ ಬಣ್ಣವೂ ಇರುವ ನಾಡಧ್ವಜವನ್ನು ಸರಕಾರ ಅಂಗೀಕರಿಸಿದ್ದು, ಸಿಎಂ ಸಿದ್ದರಾಮಯ್ಯ ಅವರ ಪ್ರತ್ಯೇಕ ನಾಡಧ್ವಜ ಆಶಯ ಸಕಾರಗೊಂಡಿದೆ.

New flag accepted for Karnataka

ಬೆಂಗಳೂರು: ಕೆಂಪು, ಹಳದಿಯೊಂದಿಗೆ ಬಿಳಿ ಬಣ್ಣವೂ ಇರುವ ನಾಡಧ್ವಜವನ್ನು ಸರಕಾರ ಅಂಗೀಕರಿಸಿದ್ದು, ಸಿಎಂ ಸಿದ್ದರಾಮಯ್ಯ ಅವರ ಪ್ರತ್ಯೇಕ ನಾಡಧ್ವಜ ಆಶಯ ಸಕಾರಗೊಂಡಿದೆ.

'ರಾಜ್ಯಕ್ಕೆ ಒಂದು ಪ್ರತ್ಯೇಕ ನಾಡ ಧ್ವಜ ಬೇಕು ಎಂಬ ಅಪೇಕ್ಷೆ ಇತ್ತು. 

ನಾಡಧ್ವಜ ಸಮಿತಿ ಸಮಗ್ರ ಚರ್ಚೆ ನಡೆಸಿ ತೀರ್ಮಾನಕ್ಕೆ ಬಂದಿದೆ. ಸರ್ಕಾರಕ್ಕೆ ನಾಡಧ್ವಜ ವಿನ್ಯಾಸದಲ್ಲಿ ಹಳದಿ ಮತ್ತು ಕೆಂಪು ಎರಡು ಬಣ್ಣಗಳನ್ನು ಉಳಿಕೊಳ್ಳಲಾಗಿದೆ,' ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

'ಎರಡು ಬಣ್ಣದ ಜೊತೆ ಬಿಳಿ ಬಣ್ಣವನ್ನೂ ಬಳಸಿಕೊಳ್ಳಲು ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಈ ನಿಟ್ಟಿನಲ್ಲಿ ಇಂದು ಕನ್ನಡ ಪರ ಸಂಘಟನೆಗಳ ಜತೆ ಚರ್ಚೆ ನಡೆಸಿದ್ದೇನೆ. ನಾಡಧ್ವಜ ಸಮಿತಿ ಸರ್ಕಾರಕ್ಕೆ ಸಲ್ಲಿಸಿರುವ ಧ್ವಜ ವಿನ್ಯಾಸವನ್ನು ಸರ್ವಾನುಮತದಿಂದ ಒಪ್ಪಿಕೊಳ್ಳಲಾಗಿದೆ,' ಎಂದರು.

'ಕೇಂದ್ರ ಸರಕಾರವೇ ಈ ಧ್ವಜವನ್ನು ನಾಡಧ್ವಜವೆಂದು ಘೋಷಿಸಲಿದೆ,' ಎಂದು ಹೇಳಿದರು.  ಹಳದಿ, ಬಿಳಿ, ಕೆಂಪು ಬಣ್ಣದ ನಡುವೆ ರಾಜ್ಯ ಸರ್ಕಾರದ ಮುದ್ರೆ ಈ ನಾಡಧ್ವಜದಲ್ಲಿದೆ.

ಸತ್ಯಮೇವ ಜಯತೇ ಇಲ್ಲ:

ಹಳದಿ,ಬಿಳಿ, ಕೆಂಪು‌ ಬಣ್ಣದ ನಡುವೆ.‌ ರಾಜ್ಯ ಸರ್ಕಾರದ ಲಾಂಚನ ಇರುವ ನಾಡಧ್ವಜದ ಲಾಂವನದಲ್ಲಿ ಇದ್ದ ಸತ್ಯಮೇವ ಜಯತೇಯನ್ನು ತೆಗೆಯಲಾಗಿದೆ. ಧ್ವಜ ಹಿಂದೆ ಮುಂದೆ ನೋಡಿದಾಗ ಅಕ್ಷರಗಳು ಉಲ್ಟಾ ಆಗಿ ಕಾಣುತ್ತೆ ಅನ್ನೋ ಕಾರಣಕ್ಕೆ ಸತ್ಯ ಮೇವ ಜಯತೆ ಬಳಸದಂತೆ ಸಭೆಯಲ್ಲಿ ನಿರ್ಧಾರ..

Follow Us:
Download App:
  • android
  • ios