ಬೆಂಗಳೂರಿನಲ್ಲಿ ನವೆಂಬರ್ 8 ರಿಂದ ಜ.26 ರವರೆಗೆ ಮಂಗಳ ಗೋಯಾತ್ರೆ ಹಮ್ಮಿಕೊಳ್ಳಲಾಗುವುದು ಎಂದು ಬಳ್ಳಾರಿಯಲ್ಲಿ ಶ್ರೀರಾಘವೇಶ್ವರ ಶ್ರೀಗಳ ಹೇಳಿದ್ದಾರೆ.
ಬಳ್ಳಾರಿ (ಅ.18): ಬೆಂಗಳೂರಿನಲ್ಲಿ ನವೆಂಬರ್ 8 ರಿಂದ ಜ.26 ರವರೆಗೆ ಮಂಗಳ ಗೋಯಾತ್ರೆ ಹಮ್ಮಿಕೊಳ್ಳಲಾಗುವುದು ಎಂದು ಬಳ್ಳಾರಿಯಲ್ಲಿ ಶ್ರೀರಾಘವೇಶ್ವರ ಶ್ರೀಗಳ ಹೇಳಿದ್ದಾರೆ.
80 ದಿನಗಳ ಕಾಲ ಗೋ ರಕ್ಷಣೆ ಕುರಿತು ಜಾಗೃತಿ ಮೂಡಿಸಲು ಯಾತ್ರೆ ಕೈಗೊಳ್ಳಲಾಗುವುದು. ಕರ್ನಾಟಕ, ಕೇರಳ, ತಮಿಳುನಾಡು, ಗೋವಾ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರದಲ್ಲೂ ಗೋಯಾತ್ರೆ ಸಂಚಾರ ನಡೆಯಲಿದೆ. ರಾಜಕೀಯ
ಮುಖಂಡರು, ವಿದ್ಜಜ್ಜನರು ಮಂಗಲ ಗೋ ಯಾತ್ರೆಯಲ್ಲಿ ಭಾಗಿಯಾಗಲಿದ್ದಾರೆ. ರೈತರ ಜೊತೆ ಚರ್ಚೆ, ಕಮ್ಮಟ, ಗೋ ಸಂಬಂಧಿ ನಿರ್ಣಯ ಮಂಡನೆ ಮಾಡಲಾಗುವುದು ಎಂದು ಶ್ರೀಗಳು ಹೇಳಿದ್ದಾರೆ.
