Asianet Suvarna News Asianet Suvarna News

ಮೈಸೂರು ವಿವಿಗೆ ಈಗ ಸಂಪೂರ್ಣ ಸ್ವಾಯತ್ತೆ

ರಾಜ್ಯದ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಕೇಂದ್ರ ಧನ ಸಹಾಯ ಆಯೋಗ (ಯುಜಿಸಿ)ವು ಸಂಪೂರ್ಣ ಸ್ವಾಯತ್ತೆಯನ್ನು ಘೋಷಿಸಿದೆ.

Mysuru Univeristy News

ನವದೆಹಲಿ : ರಾಜ್ಯದ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಕೇಂದ್ರ ಧನ ಸಹಾಯ ಆಯೋಗ (ಯುಜಿಸಿ)ವು ಸಂಪೂರ್ಣ ಸ್ವಾಯತ್ತೆಯನ್ನು ಘೋಷಿಸಿದೆ. ಇದರ ಜತೆಗೆ, ರಾಜ್ಯದ ಜೈನ್‌ ವಿಶ್ವವಿದ್ಯಾಲಯ, ಮಣಿಪಾಲ… ಅಕಾಡೆಮಿ ಆಫ್‌ ಹೈಯರ್‌ ಎಜುಕೇಷನ್‌, ಕೆಎಲ್ಇ ಅಕಾಡೆಮಿ ಆಫ್‌ ಹೈಯರ್‌ ಎಜುಕೇಷನ್‌ ಮತ್ತು ರಿಸಚ್‌ರ್‍, ಜೆಎಸ್‌ಎಸ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಷನ್‌ ಮತ್ತು ರಿಸಚ್‌ರ್‍ ಖಾಸಗಿ ಸಂಸ್ಥೆಗಳನ್ನು ಡೀಮ್‌್ಡ ವೀವಿಗಳ ಪಟ್ಟಿಗೆ ಸೇರಿಸಿದೆ.

ಯುಜಿಸಿಯು ಒಟ್ಟು 60 ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಪೂರ್ಣ ಸ್ವಾಯತ್ತೆ ನೀಡಿದೆ. ಇದರಲ್ಲಿ 5 ಕೇಂದ್ರಿಯ ವಿಶ್ವವಿದ್ಯಾಲಯ, 21 ರಾಜ್ಯ ವಿಶ್ವವಿದ್ಯಾಲಯ, 24 ಡೀಮ್‌ಡ್ ಖಾಸಗಿ ವಿಶ್ವವಿದ್ಯಾಲಯಗಳು, 2 ಖಾಸಗಿ ವಿಶ್ವವಿದ್ಯಾಲಯ ಮತ್ತು 8 ಕಾಲೇಜುಗಳಿವೆ.

ಪೂರ್ಣ ಪ್ರಮಾಣದ ಸ್ವಾಯತ್ತೆ ಪಡೆದಿರುವ ಸಂಸ್ಥೆಗಳು ತಮ್ಮ ದಾಖಲಾತಿ ಪ್ರಕ್ರಿಯೆ, ಶುಲ್ಕ ಮತ್ತು ಪಠ್ಯಗಳನ್ನು ನಿರ್ಧರಿಸಲು ಮುಕ್ತ ಅಧಿಕಾರ ಹೊಂದಿದೆ ಎಂದು ಪಟ್ಟಿಬಿಡುಗಡೆ ಮಾಡಿದ ಮಾನವ ಸಂಪನ್ಮೂಲ ಸಚಿವ ಪ್ರಕಾಶ್‌ ಜಾವಡೇಕರ್‌ ಹೇಳಿದ್ದಾರೆ.

ಕೇಂದ್ರಿಯ ವಿವಿಗಳಲ್ಲಿ 3.77 ನ್ಯಾಕ್‌ ಅಂಕದೊಂದಿಗೆ ದೆಹಲಿಯ ವಿವಾದಾಸ್ಪದ ಜವಾಹರ್‌ ಲಾಲ್ ನೆಹರೂ ವಿಶ್ವವಿದ್ಯಾಲಯ ಮೊದಲ ಸ್ಥಾನ ಪಡೆದಿದೆ. ರಾಜ್ಯ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ 13ನೇ ಸ್ಥಾನ ಪಡೆದಿರುವ ಮೈಸೂರು ವಿವಿಯು 3.47 ನ್ಯಾಕ್‌ ಅಂಕ ಪಡೆದುಕೊಂಡಿದೆ.

ಡೀಮ್‌್ಡ ವಿವಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಜೈನ್‌ ವಿವಿಯು ಎ (3.31) ಅಂಕ ಪಡೆದಿದ್ದು, 2022ರ ಜುಲೈ ವರೆಗೆ ಈ ಮಾನ್ಯತೆ ಹೊಂದಿರಲಿದೆ. ಮಣಿಪಾಲ ವಿವಿಯು ಎ (3.30) ಅಂಕ ಪಡೆದಿದ್ದು 2021ರ ಜುಲೈ, ಎ (3.34) ಅಂಕ ಹೊಂದಿರುವ ಕೆಎಲ್ಇ 2021ರ ಜುಲೈ, ಎ (3.34) ಅಂಕದೊಂದಿಗೆ ಜೆಎಸ್‌ಎಸ್‌ 2018ರ ಜುಲೈಯ ವರೆಗೆ ಈ ಮಾನ್ಯತೆ ಹೊಂದಿದೆ.

Follow Us:
Download App:
  • android
  • ios