ಮಠ ಮಾನ್ಯಗಳನ್ನು ಧಾರ್ಮಿಕ ದತ್ತಿ ಕಾಯಿದೆಗೆ ಒಳಪಡಿಸುವ ಸರಕಾರದ ಚಿಂತನೆಗೆ ಸಿದ್ದಗಂಗಾ ಕಿರಿಯ ಶ್ರೀಗಳು ವಿರೋಧ ವ್ಯಕ್ತಪಡಿಸಿದ್ದಾರೆ.

ತುಮಕೂರು: ಮಠ ಮಾನ್ಯಗಳನ್ನು ಧಾರ್ಮಿಕ ದತ್ತಿ ಕಾಯಿದೆಗೆ ಒಳಪಡಿಸುವ ಸರಕಾರದ ಚಿಂತನೆಗೆ ಸಿದ್ದಗಂಗಾ ಕಿರಿಯ ಶ್ರೀಗಳು ವಿರೋಧ ವ್ಯಕ್ತಪಡಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಾಧ್ಯಮ ಹೇಳಿಕೆ ನೀಡಿರುವ ಕಿರಿಯ ಶ್ರೀಗಳಾದ ಸಿದ್ದಲಿಂಗ ಸ್ವಾಮಿಜಿ, 'ಮಠಗಳಿಗೆ ತನ್ನದೇ ಆದ ಅಸ್ತಿತ್ವವಿದೆ ಹಾಗೂ ಆಚಾರ-ವಿಚಾರಗಳಿರುವುದರಿಂದ ಮಠ ಮಾನ್ಯಗಳನ್ನು ಧಾರ್ಮಿಕ ದತ್ತಿ ಕಾಯಿದೆಗೆ ಒಳ ಪಡಿಸಲು ಸಾಧ್ಯವಿಲ್ಲ,' ಎಂದು ಹೇಳಿದ್ದಾರೆ.

'ಮಠಗಳಿಗೆ ತನ್ನದೆ ಆದ ಸ್ವಾತಂತ್ರ್ಯ ಇದೆ. ರಾಜ್ಯದ ಎಲ್ಲ ಮಠದ ಸ್ವಾಮಿಗಳು ಈ ಕುರಿತು ಚರ್ಚಿಸುತ್ತೇವೆ. ಈ ಹಿಂದೆಯೂ ಈ ಕಾಯಿದೆಗೆ ವಿರೋಧ ವ್ಯಕ್ತವಾಗಿತ್ತು. ಮತ್ತೆ ಮಠಗಳನ್ನು ಧಾರ್ಮಿಕ ದತ್ತಿ ಕಾಯಿದೆಗೆ ತರುವುದು ಉಚಿತವಲ್ಲ. ಈ ಕುರಿತು ಸರ್ಕಾರಕ್ಕೆ ಸಲಹೆ ನೀಡುತ್ತೇವೆ,' ಎಂದಿದ್ದಾರೆ.