ಈ ಹತ್ಯೆ ಪ್ರಕರಣದ ಆರೋಪಿಗಳು ಸುವರ್ಣ ನ್ಯೂಸ್ ಗೆ ಸಿಕ್ಕಿದ್ದಾರೆ. ಈ ಹಿನ್ನಲೆಯಲ್ಲಿ ಹಂತಕರಾದ ಮಹೇಶ್, ಸತಿಶ್ ಅಲಿಯಾಸ್ ಷಡ್ಕ ,ಮೋಹನ್ ರಾಜೇಶ್ , ಜಗ ಎಂಬುವವರು ತಾವೆ ವೆಂಕಟರಮಣಪ್ಪನನ್ನು ಬೆಳಗಿನ ಜಾವ ಫಾಲೋ ಮಾಡಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಇಂದು ಸಂಜೆ ವೇಳೆಗೆ ಎಸ್ ಪಿ ಕಚೇರಿ ಮುಂದೆ ಶರಣಾಗುವುದಾಗಿ ಹೇಳಿದ್ದಾರೆ.

ಚಿಕ್ಕಬಳ್ಳಾಫುರ (ನ.17): ನಿನ್ನೆ ಬೆಳಗಿನ ಜಾವ ಇಲ್ಲಿನ ಶಿಡ್ಲಘಟ್ಟ ಕರವೇ ಬಣದ ಮುಖಂಡ ವೆಂಕಟರಮಣಪ್ಪ ಅಲಿಯಾಸ್ ಮಿಲ್ಟ್ರಿ ಎಂಬಾತನನ್ನ ಕಟಿಂಗ್ ಶಾಪ್ ನಲ್ಲಿ ಲಾಂಗ್ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು.

ಈ ಹತ್ಯೆ ಪ್ರಕರಣದ ಆರೋಪಿಗಳು ಸುವರ್ಣ ನ್ಯೂಸ್ ಗೆ ಸಿಕ್ಕಿದ್ದಾರೆ. ಈ ಹಿನ್ನಲೆಯಲ್ಲಿ ಹಂತಕರಾದ ಮಹೇಶ್, ಸತಿಶ್ ಅಲಿಯಾಸ್ ಷಡ್ಕ ,ಮೋಹನ್ ರಾಜೇಶ್ , ಜಗ ಎಂಬುವವರು ತಾವೆ ವೆಂಕಟರಮಣಪ್ಪನನ್ನು ಬೆಳಗಿನ ಜಾವ ಫಾಲೋ ಮಾಡಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಇಂದು ಸಂಜೆ ವೇಳೆಗೆ ಎಸ್ ಪಿ ಕಚೇರಿ ಮುಂದೆ ಶರಣಾಗುವುದಾಗಿ ಹೇಳಿದ್ದಾರೆ.

ಆರೋಪಿ ಮಹೇಶ್'ನ ಚಿಕ್ಕಪ್ಪ ದೇವರಾಜಯಾದವ್'ನನ್ನು ವೆಂಕಟರಮಣಪ್ಪ ಕೊಲೆ ಮಾಡಿದ್ದ. ನಂತರ ಮಹೇಶನ ಮೇಲೂ ಕೊಲೆಗೆ ಯತ್ನಿಸಿದ್ದ ಹಿನ್ನಲೆಯಲ್ಲಿ ನಾನು ಕೊಲೆ ಮಾಡಿದೆ ಎಂದು ಮಹೇಶ್ ಹೇಳಿದ್ದಾನೆ. ಇನ್ನೊಬ್ಬ ಆರೋಪಿ ಸತೀಷ್ ಅಲಿಯಾಸ್ ಷಡ್ಕ ಕವಳ ಮರ್ಡರ್ ಕೇಸ್ ನಲ್ಲಿ ಆರೋಪಿಯಾಗಿದ್ದ. ಕೊಲೆಯಾದ ವೆಂಕಟರಮಣ್ಣಪ್ಪನ ಮೇಲೆ ಈ ಹಿಂದೆ ಎರಡು ಕೊಲೆ ಪ್ರಕರಣಗಳಿದ್ದು ಆತನ ಮೇಲೆ ರೌಡೀಶೀಟರ್ ಇದೆ .

ಕೊಲೆಮಾಡಿ ಪರಾರಿಯಾಗಿದ್ದ ಹಂತಕರು ಇಂದು ಸುವರ್ಣ ನ್ಯೂಸ್ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ.