ತಾಯಿ ಮಗಳು ಇಬ್ಬರೂ ಕೂಡ ನೇಣಿಗೆ ಶರಣಾದ ಘಟನೆ ಬೆಂಗಳೂರಿನ ಪ್ರಕಾಶ್ ನಗರದಲ್ಲಿ ನಡೆದಿದೆ.  

ಬೆಂಗಳೂರು : ತಾಯಿ ಮಗಳು ಇಬ್ಬರೂ ಕೂಡ ನೇಣಿಗೆ ಶರಣಾದ ಘಟನೆ ಬೆಂಗಳೂರಿನ ಪ್ರಕಾಶ್ ನಗರದಲ್ಲಿ ನಡೆದಿದೆ. ತಾಯಿ ಸಾವಿತ್ರಮ್ಮ, ಮಗಳು ಸಾವಿಗೆ ಶರಣಾದ ದುರ್ದೈವಿಗಳಾಗಿದ್ದಾರೆ. ಮಗಳಿಗೆ 37 ವರ್ಷ ವಯಸ್ಸಾದರೂ ಕೂಡ ಮದುವೆ ಆಗಿರಲಿಲ್ಲ.

ಅನೇಕ ಜನರು ಆಕೆಯನ್ನು ಮದುವೆ ಮಾಡಿಕೊಳ್ಳಲು ಮುಂದೆ ಬಂದಿದ್ದರೂ ಕೂಡ ಆಕೆಗೆ ವಿವಾಹ ಭಾಗ್ಯ ಒಲಿದಿರಲಿಲ್ಲ. ಇದೇ ಕಾರಣದಿಂದ ಇಬ್ಬರೂ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

10 ವರ್ಷಗಳ ಹಿಂದೆಯೇ ಮಗ ಮದುವೆಯಾಗಿ ಕೆಂಗೇರಿಯಲ್ಲಿ ವಾಸವಾಗಿದ್ದಾನೆ. ಆದರೆ ರಾಜಾಜಿನಗರ ಬಳಿಯ ಪ್ರಕಾಶ್ ನಗರದಲ್ಲಿ ತಾಯಿ ಮಗಳು ಇಬ್ಬರೇ ವಾಸವಾಗಿದ್ದು, ಇಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.