ವಿದ್ವತ್ ಹಾಗೂ ಲೋಕಾ ನ್ಯಾಯಮೂರ್ತಿ ಚಿಕಿತ್ಸೆ ಪಡೆದ ಆಸ್ಪತ್ರೆ 20 ದಿನ ಕ್ಲೋಸ್!

ಶಾಂತಿನಗರ ಶಾಸಕ ಎನ್.ಎ.ಹ್ಯಾರೀಸ್ ಪುತ್ರ ನಲಪಾಡ್‌ನಿಂದ ಹಲ್ಲೆಗೊಳಗಾದ ವಿದ್ವತ್ ಹಾಗೂ ವ್ಯಕ್ತಿಯೊಬ್ಬನಿಂದ ಹಲ್ಲೆಗೊಳಗಾದ ಲೋಕಾಯಕ್ತ ನ್ಯಾ.ವಿಶ್ವನಾಥ್ ಶೆಟ್ಟಿ ಚಿಕಿತ್ಸೆ ಪಡೆದ ಕಾರಣ ಸುದ್ದಿಯಲ್ಲಿರುವ ಮಲ್ಯ ಆಸ್ಪತ್ರೆಯನ್ನು 20 ದಿನಗಳ ಕಾಲ ನವೀಕರಣಕ್ಕಾಗಿ ಮುಚ್ಚಲಾಗುವುದು.

Mallya Hospital to be closed for 20 days for renovation

ಬೆಂಗಳೂರು: ಶಾಂತಿನಗರ ಶಾಸಕ ಎನ್.ಎ.ಹ್ಯಾರೀಸ್ ಪುತ್ರ ನಲಪಾಡ್‌ನಿಂದ ಹಲ್ಲೆಗೊಳಗಾದ ವಿದ್ವತ್ ಹಾಗೂ ವ್ಯಕ್ತಿಯೊಬ್ಬನಿಂದ ಹಲ್ಲೆಗೊಳಗಾದ ಲೋಕಾಯಕ್ತ ನ್ಯಾ.ವಿಶ್ವನಾಥ್ ಶೆಟ್ಟಿ ಚಿಕಿತ್ಸೆ ಪಡೆದ ಕಾರಣ ಸುದ್ದಿಯಲ್ಲಿರುವ ಮಲ್ಯ ಆಸ್ಪತ್ರೆಯನ್ನು 20 ದಿನಗಳ ಕಾಲ ನವೀಕರಣಕ್ಕಾಗಿ ಮುಚ್ಚಲಾಗುವುದು.

ಆದಿಕೇಶವಲು ಅವರು ಒಡೆತನಕ್ಕೆ ಸೇರಿರುವ ಈ ಆಸ್ಪತ್ರೆಯನ್ನು ನವೀಕರಣಗೊಳಿಸುತ್ತಿದ್ದು, ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಲಾಗುತ್ತದೆ, ಎನ್ನಲಾಗಿದೆ.

ಈ ಆಸ್ಪತ್ರೆ ಆಧುನೀಕರಣಗೊಂಡರೆ ಏಷ್ಯಾದಲ್ಲಿಯೇ ನಂ.1 ಆಸ್ಪತ್ರೆ ಆಗುವುದು ಎನ್ನಲಾಗುತ್ತಿದೆ. 7 ಸ್ಟಾರ್ ಸೌಲಭ್ಯಗಳಿರುವ 210 ಬೆಡ್ ಇಲ್ಲಿ ಇರಲಿದೆ. ಅಮೆರಿಕ ಹಾಗೂ ಸಿಂಗಾಪುರ್‌ನಲ್ಲಿ ಲಭ್ಯವಿರುವಂತ ಚಿಕಿತ್ಸೆ ಇನ್ನು ಮುಂದೆ ಇಲ್ಲಿಯೇ ಲಭ್ಯವಾಗಲಿದ್ದು, ಅಂತಾರಾಷ್ಟ್ರೀಯ ತಂತ್ರಜ್ಞಾನದಲ್ಲಿ ಮರು ರ್ಮಾಣವಾಗಲಿದೆ.
 

Latest Videos
Follow Us:
Download App:
  • android
  • ios