ಬಸವಕಲ್ಯಾಣ ಕ್ಷೇತ್ರದ ಜೆಡಿಎಸ್ ಶಾಸಕ ಮಲ್ಲಿಕಾರ್ಜುನ ಖೂಬಾ ಅವರು ಮತ್ತೆ ‘ಯೂ ಟರ್ನ್’ ಹೊಡೆದಿದ್ದಾರೆ.

ಬಸವಕಲ್ಯಾಣ: ಬಸವಕಲ್ಯಾಣ ಕ್ಷೇತ್ರದ ಜೆಡಿಎಸ್ ಶಾಸಕ ಮಲ್ಲಿಕಾರ್ಜುನ ಖೂಬಾ ಅವರು ಮತ್ತೆ ‘ಯೂ ಟರ್ನ್’ ಹೊಡೆದಿದ್ದಾರೆ.

ಜೆಡಿಎಸ್ ಸಾಂಗತ್ಯಕ್ಕೆ ಕೊನೆ ಹೇಳಿ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರನ್ನೂ ಭೇಟಿಯಾಗಿ ಪಕ್ಷ ಸೇರ್ಪಡೆ ಬಗ್ಗೆ ಘೋಷಣೆ ಮಾಡಿದ್ದ ಅವರೀಗ, ನಾನಿನ್ನೂ ಜೆಡಿಎಸ್‌ಗೆ ರಾಜೀನಾಮೆ ಕೊಟ್ಟಿಲ್ಲ.

 ಬಿಜೆಪಿ ಸೇರುವ ನಿರ್ಧಾರ ಮಾಡಿದ್ದೆ, ಆದರೆ ಸೇರಿಲ್ಲ. ಏ.5ರಂದು ಅಂತಿಮ ನಿರ್ಧಾರ ಬಹಿರಂಗ ಮಾಡುತ್ತೇನೆ ಎಂದು ಅವರು ಹೇಳಿದ್ದಾರೆ.