ಶ್ರೀ ಕೃಷ್ಣಮಠದ ಇತಿಹಾಸದಲ್ಲಿ ಇದೇ ಮೊದಲಬಾರಿಗೆ ಎಡೆಸ್ನಾನ ನಡೆಯಿತು.
ಉಡುಪಿ (ಡಿ.05): ಶ್ರೀ ಕೃಷ್ಣ ಮಠದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಎಡೆಸ್ನಾನ ನಡೆಯಿತು.
ಷಷ್ಟಿಯ ದಿನ ಸುಬ್ರಹ್ಮಣ್ಯ ಗುಡಿಯ ಆವರಣದಲ್ಲಿ ಮಡೆಸ್ನಾನ ನಡೆಯೋದು ಇಲ್ಲಿನ ಸಂಪ್ರದಾಯ. ಆದರೆ ಈಗ ಪೇಜಾವರ ಸ್ವಾಮೀಜಿಗಳ ಪರ್ಯಾಯ ನಡೆಯುತ್ತಿದೆ. ಮಡೆಸ್ನಾನಕ್ಕೆ ಬದಲಾಗಿ ಎಡಸ್ನಾನವನ್ನು ಅವರೇ ಸರ್ಕಾರಕ್ಕೆ ಸೂಚಿಸಿದ್ದು,
ಹಾಗಾಗಿ ತಮ್ಮ ಪರ್ಯಾಯದ ಅವಧಿಯಲ್ಲಿ ಎಡೆಸ್ನಾನ ಆರಂಭಿಸುವ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ.
ಬ್ರಾಹ್ಮಣರು ಉಂಡ ಎಲೆಯಲ್ಲಿ ಮಡೆಸ್ನಾನ ನಡೆಸಿದರೆ ಜಾತಿ ವೈಷಮ್ಯಕ್ಕೆ ಕಾರಣವಾಗುತ್ತದೆ. ಆದರೆ ದೇವರ ಪ್ರಸಾದದ ಮೇಲೆ ಉರುಳು ಸೇವೆ ಮಾಡಿದರೆ ಯಾವುದೇ ವಿವಾದಕ್ಕೆ ಅವಕಾಶವಿಲ್ಲ. ಎಡೆಸ್ನಾನದ ಬಳಿಕ ಎಲೆ ಹಾಗೂ ಅನ್ನವನ್ನು
ಗೋವುಗಳಿಗೆ ಅರ್ಪಿಸೋದರಿಂದ ತಿನ್ನುವ ಆಹಾರ ವ್ಯರ್ಥ ಆಗೋದಿಲ್ಲ ಎಂದು ಸ್ವಾಮೀಜಿ ಹೇಳಿದ್ದಾರೆ.
ಮಡೆಸ್ನಾನದ ಹರಕೆ ಹೊತ್ತ ಏಳು ಮಂದಿ ಎಡೆಸ್ನಾನ ನಡೆಸುವ ಮೂಲಕ ಈ ಹೊಸ ಪದ್ಧತಿಯನ್ನು ಸ್ವಾಗತಿಸಿದ್ದಾರೆ.
