ಸ್ಥಳಕ್ಕೆ ಬಂದ ಅರಣ್ಯಾಧಿಕಾರಿಗಳು ಸೆರೆ ಸಿಕ್ಕ ಚಿರತೆಯನ್ನು ಮೃಗಾಲಯಕ್ಕೆ ರವಾನಿಸಿದ್ದಾರೆ. ಚಿರತೆ ಸಿಕ್ಕಿದ್ದರಿಂದ ಗ್ರಾಮಸ್ಥರಲ್ಲಿ ಆತಂಕ ದೂರವಾದಂತಾಗಿದೆ.

ಮಂಡ್ಯ(ಡಿ.02): ಕಳೆದ ನಾಲ್ಕೈದು ತಿಂಗಳುಗಳಿಂದ ಜಾನುವಾರುಗಳಿಗೆ ಕಂಠಕಪ್ರಾಯವಾಗಿದ್ದ ಚಿರತೆಯನ್ನು ಸೆರೆಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಂಡ್ಯದ ನಾಗಮಂಗಲ ತಾಲೋಕಿನ ದೊಡ್ಡಘಟ್ಟ ಗ್ರಾಮದಲ್ಲಿ ಚಿರತೆಯು ಗ್ರಾಮದ ಜನರಿಗೆ ತಲೆನೋವಾಗಿ ಪರಿಣಮಿಸಿತ್ತು. ಅರಣ್ಯ ಇಲಾಖೆಯು ಗ್ರಾಮದ ಹೊರವಲಯದ ಗವಿರಂಗಪ್ಪ ದೇವಸ್ಥಾನದ ಬಳಿ ಇಟ್ಟಿದ್ದ ಬೋನಿಗೆ ಸುಮಾರು 6 ವರ್ಷ ಪ್ರಾಯದ ಚಿರತೆ ಸಿಕ್ಕಿಬಿದ್ದಿದೆ.

ಸ್ಥಳಕ್ಕೆ ಬಂದ ಅರಣ್ಯಾಧಿಕಾರಿಗಳು ಸೆರೆ ಸಿಕ್ಕ ಚಿರತೆಯನ್ನು ಮೃಗಾಲಯಕ್ಕೆ ರವಾನಿಸಿದ್ದಾರೆ. ಚಿರತೆ ಸಿಕ್ಕಿದ್ದರಿಂದ ಗ್ರಾಮಸ್ಥರಲ್ಲಿ ಆತಂಕ ದೂರವಾದಂತಾಗಿದೆ.