Asianet Suvarna News Asianet Suvarna News

ಸಿದ್ದರಾಮಯ್ಯ ಸರಕಾರದ ಕಡೆಯ ಅಧಿವೇಶನ ಆರಂಭ, ಮಹದಾಯಿ ಪ್ರಸ್ತಾಪಿಸಿದ ರಾಜ್ಯಪಾಲರು

ಸಿದ್ದರಾಮಯ್ಯ ಸರ್ಕಾರದ ಕೊನೆಯ ಅಧಿವೇಶನ ಫೆ.5ರಿಂದ 28ರವರೆಗೆ ನಡೆಯಲಿದ್ದು, ರಾಜ್ಯಪಾಲ ವಾಜುಬಾಯಿ ವಾಲ ಅವರು ಜಂಟಿ ಸದನಗಳನ್ನು ಉದ್ದೇಶಿಸಿ ಮಾತನಾಡಿ, ರಾಜ್ಯ ಸರಕಾರದ ಸಾಧನೆಗಳನ್ನು ಕೊಂಡಾಡಿದರು.

Last session of CM Siddaramaiah government begins with governor joint session speech

ಬೆಂಗಳೂರು: ಸಿದ್ದರಾಮಯ್ಯ ಸರ್ಕಾರದ ಕೊನೆಯ ಅಧಿವೇಶನ ಫೆ.5ರಿಂದ 28ರವರೆಗೆ ನಡೆಯಲಿದ್ದು, ರಾಜ್ಯಪಾಲ ವಾಜುಬಾಯಿ ವಾಲ ಅವರು ಜಂಟಿ ಸದನಗಳನ್ನು ಉದ್ದೇಶಿಸಿ ಮಾತನಾಡಿ, ರಾಜ್ಯ ಸರಕಾರದ ಸಾಧನೆಗಳನ್ನು ಕೊಂಡಾಡಿದರು.

'ಕರ್ನಾಟಕ ಅಭಿವೃದ್ಧಿ ಸದಾ ಮುಂಚೂಣಿಯಲ್ಲಿದೆ. ಭವಿಷ್ಯದಲ್ಲಿ ಇದೇ ಹಾದಿಯಲ್ಲಿ ಇನ್ನಷ್ಟು ಸಾಧಿಸಲಿದೆ. ಎಲ್ಲ ಜನರ ದೃಷ್ಟಿಯೂ ಕರ್ನಾಟಕದ ಮೇಲಿದೆ. ವಿಧಾನಸಭೆ ಸದಸ್ಯರು ರಚನಾತ್ಮಕ ಹಾದಿಯನ್ನು ತಮ್ಮದಾಗಿಸಿಕೊಳ್ಳಬೇಕು. ವಿಸ್ತೃತ, ಗಹನ ಅಭಿವೃದ್ಧಿ ಕಾರ್ಯಕ್ರಮಗಳಿಗಾಗಿ ವಿಧಾನ ಮಂಡಲ ಚೌಕಟ್ಟು ರೂಪಿಸಬೇಕು,' ಎಂದು ಕರೆ ನೀಡಿದರು.

'ಮಹದಾಯಿ ಜಲಾನಯನ ಪ್ರದೇಶದಿಂದ ನಮ್ಮ ಜನರ ಹಕ್ಕಿನ ಪಾಲನ್ನು ದೊರಕಿಸುವಲ್ಲಿ ಎಲ್ಲ ರೀತಿಯ ಪ್ರಯತ್ನಿಸಲಾಗುವುದ,' ಎಂದು ರಾಜ್ಯಪಾಲರು ಭರವಸೆ ನೀಡಿದರು.


'ಹಸಿವು ಮುಕ್ತ ಕರ್ನಾಟಕದ ಗುರಿ. ಆರ್ಥಿಕ ಅಭಿವೃದ್ಧಿಯಲ್ಲಿ ಸಾಧನೆ. ಕಾನೂನು ಸುವ್ಯವಸ್ಥೇ ಕಾಪಾಡಲು ಕೋಮು ಸೌಹಾರ್ದತೆ ಕಾಪಾಡಲು ಹಠಾತ್ ಸಂಭವಿಸುವ ಕೋಮು ಹಿಂಸಾ ಘಟನೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಕಾವೇರಿ ಕೃಷ್ಣ ನೀರಿಗಾಗಿ ನ್ಯಾಯಯುತ ಬೇಡಿಕೆ ಈಡೇರಿಸಿಕೊಳ್ಳಲು ಬದ್ಧತೆ ತೋರಲಾಗುವುದು. ಸಮಾಜದ ಎಲ್ಲ ವರ್ಗಗಳ ಕಲ್ಯಾಣ, ಸಾಮಾಜಿಕ ನ್ಯಾಯ ಒದಗಿಸಲು ಸರ್ಕಾರ ಗಮನಿಸಲಿದೆ,' ಎಂದು ಹೇಳಿದರು.

'ತೆರಿಗೆಯೇತರ ಸಂಗ್ರಹಗಳನ್ನು ಹೆಚ್ಚಿಸಲು ರಾಜ್ಯ ಯತ್ನಿಸುತ್ತಿದ್ದು, ರಾಜ್ಯಕ್ಕೆ ಮತ್ತಷ್ಟು ಆದಾಯ ಹೆಚ್ಚಾಗುವ ನಿರೀಕ್ಷೆಯಿದೆ. ಜಿಎಸ್‌ಟಿಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗಿದ್ದು, ಕೆಲವೊಂದು ಬದಲಾವಣೆಗಳನ್ನೂ ಮಾಡಲಾಗಿದೆ. ಈ ಸಂದರ್ಭದಲ್ಲಿ ತೆರಿಗೆ ಸಂಗ್ರಹದಲ್ಲಿ ತುಸು ಏರಿಳಿತವಾಗಿದ್ದು, ಕೇಂದ್ರ ಸರ್ಕಾರದಿಂದ ಬರಬೇಕಾದ ನಷ್ಟ ಪರಿಹಾರದ ಮೂಲಕ ಕೊರತೆ ನೀಗಿಸಬಹುದು,' ಎಂದು ಹೇಳಿದರು.

'2013ರಲ್ಲಿ 11ನೇ ಸ್ಥಾನದಲ್ಲಿದ ಕರ್ನಾಟಕದ ಇದೀಗ ಬಂಡವಾಳ ಹೂಡಿಕೆಯಲ್ಲಿ ರಾಜ್ಯ ಮೊದಲ ಸ್ಥಾನಕ್ಕೇರಿದೆ. ಕೆಂಪೇಗೌಡ ಏರ್‌ಪೋರ್ಟ್‌ಗೆ ಹೊಂದಿಕೊಂಡಿರುವ 407 ಎಕರೆಯಲ್ಲಿ ಬೆಂಗಳೂರು ಸಿಗ್ನೇಚರ್ ಬಿಸಿನೆಸ್ ಪಾರ್ಕ್ ಅಭಿವೃದ್ಧಿಪಡಿಸಲು ಅನುಮೋದನೆ ನೀಡಲಾಗಿದೆ,' ಎಂದರು.

'KSRTC ರಾಷ್ಟ್ರೀಯ ಇ- ಆಡಳಿತ ಪ್ರಶಸ್ತಿ ಪಡೆದುಕೊಂಡಿದೆ. 2021ರ ಮಾರ್ಚ್ ವೇಳೆಗೆ 72 0.ಕಿಮೀಗಳ ಮೆಟ್ರೋ ಮಾರ್ಗ ಪೂರ್ಣಗೊಳಿಸಲಾಗುವುದು. ಬೆಂಗಳೂರು ಮೆಟ್ರೋಪಾಲಿಟನ್ ಪ್ರದೇಶಕ್ಕೆ ಉಪನಗರ ರೈಲ್ವೆ ಪರಿಚಯಿಸಲು ಕೇಂದ್ರ ರೈಲ್ವೆ ಇಲಾಖೆಗೆ ಮನವಿಗೆ ಕ್ರಮ ಕೈಗೊಳ್ಳಲಾಗಿದೆ,' ಎಂದು ತಿಳಿಸಿದರು.

ರಾಜ್ಯಪಾಲರು ಹೇಳಿದ್ದೇನು?

- 2020ರ ಅಂತ್ಯದ ವೇಳೆಗೆ 4 ಹೆಚ್ಚುವರಿ ತ್ಯಾಜ್ಯ ಶುದ್ಧೀಕರಣ ಘಟಕ ಸ್ಥಾಪನೆ.

- ವಿದ್ಯುತ್ ಪ್ರಸರಣ, ವಿತರಣೆಯಲ್ಲಾಗುವ ನಷ್ಟದಲ್ಲಿ ಗಣನೀಯ ಇಳಿಕೆ. ಕಳೆದ 5 ವರ್ಷಗಳಲ್ಲಿ ನಷ್ಟ ಇಳಿಕೆಯಾಗಿದೆ. 

- ಪಾವಗಡದಲ್ಲಿ 2 ಸಾವಿರ ಮೆಗಾವ್ಯಾಟ್ ಸಾಮರ್ಥ್ಯದ ಸೋಲಾರ್ ಪಾರ್ಕ್ ನಿರ್ಮಾಣ. ಬೆಂಗಳೂರಿನ ಕೆರೆಗಳ ರಕ್ಷಣೆ, ಸಂರಕ್ಷಣೆಗೆ ಸಮರ್ಥಿನೀಯ ಕ್ರಮ.

- ತ್ಯಾಜ್ಯ ನೀರು ಶುದ್ಧೀಕರಣ, ಬೆಂಗಳೂರಲ್ಲಿ 84.6 ಕೋಟಿ ಲೀಟರ್ ತ್ಯಾಜ್ಯ ನೀರು ಸಂಸ್ಕರಿಸುವ 18 ತ್ಯಾಜ್ಯ ನೀರು ಶುದ್ಧೀಕರಣ ಘಟಕ ಕಾರ್ಯ ನಿರ್ವಹಿಸುತ್ತಿವೆ.

- ‘ಮುಖ್ಯಮಂತ್ರಿಗಳ ಬೆಂಗಳೂರು’ ವಸತಿ ಯೋಜನೆಯಡಿ 1 ಲಕ್ಷ ಮನೆಗಳ ನಿರ್ಮಾಣ.

- ಎಲ್ಲ ತಾಲೂಕು, ಜಿಲ್ಲಾ ಕೇಂದ್ರ, ನಗರ ಸ್ಥಳೀಯ ಸಂಸ್ಥೆಗಳಲ್ಲಿ 247 ಇಂದಿರಾ ಕ್ಯಾಂಟಿನ್ ಆರಂಭ

32 ಪುಟಗಳ ರಾಜ್ಯಪಾಲರ ಭಾಷಣಕ್ಕೂ ಚುನಾವಣೆ ಬಿಸಿ ತಟ್ಟಿದ್ದು, ಕಲಾಪಕ್ಕೆ ಬಹುತೇಕ ಶಾಸಕರು, ಸಚಿವರು ಗೈರಾಗಿದ್ದರು. 

Follow Us:
Download App:
  • android
  • ios