ಬೆಂಗಳೂರಿನಲ್ಲಿ ಕೇರಳ ಯುವತಿಯಿಂದ ಜನ ಜಾಗೃತಿ ..! ವೈರಲ್ ಆಯ್ತು ವಿಚಾರ..!

First Published 19, Mar 2018, 11:07 AM IST
Lady Create awareness among People on Traffic Rules
Highlights

ಫುಟ್ ಪಾತ್ ಮೇಲೆಲ್ಲಾ ಸಂಚರಿಸುವ ಬೈಕ್ ಸವಾರರ ವಿರುದ್ಧದ ಅಭಿಯಾನ ಮಾಡಿ, ಫುಟ್ ಪಾತಲ್ಲಿ ಅಡ್ಡಗಟ್ಟಿ ವಿನೂತನ ಅಭಿಯಾನ ನಡೆಸುತ್ತಿದ್ದಾರೆ ಇಲ್ಲೋರ್ವ ದಿಟ್ಟ ಯುವತಿ.

ಬೆಂಗಳೂರು :  ಫುಟ್ ಪಾತ್ ಮೇಲೆಲ್ಲಾ ಸಂಚರಿಸುವ ಬೈಕ್ ಸವಾರರ ವಿರುದ್ಧದ ಅಭಿಯಾನ ಮಾಡಿ, ಫುಟ್ ಪಾತಲ್ಲಿ ವಾಃನಗಳನ್ನು  ಅಡ್ಡಗಟ್ಟಿ ವಿನೂತನ ಅಭಿಯಾನ ನಡೆಸುತ್ತಿದ್ದಾರೆ ಇಲ್ಲೋರ್ವ ದಿಟ್ಟ ಯುವತಿ.  ಫುಟ್ ಪಾತ್ ಮೇಲೆ ಸಂಚರಿಸುವ ಬೈಕ್ ಸವಾರರಿಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತಾರೆ ಬೆಂಗಳೂರಿನಲ್ಲಿ ನೆಲೆಸಿ ಇಲ್ಲೇ ಉದ್ಯೋಗ ಮಾಡುತ್ತಿರುವ ಕೇರಳ ಮೂಲದ ಮಂಜು ಥಾಮಸ್.

ಈ ರೀತಿಯಾಗಿ ಕಾರ್ಯ ನಿರ್ವಹಿಸುವ  ಖಾಸಗಿ ಕಂಪನಿಯ ಉದ್ಯೋಗಿಯಾಗಿರುವ ಯುವತಿಯ ವಿಡಿಯೋ ವೈರಲ್ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದ್ದು, ಯುವತಿಯ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ.

ಪಾದಚಾರಿಗಳಿಗೇ ಮೀಸಲಿರುವ ಫುಟ್ ಪಾತ್ ಮೇಲೆ ಬೈಕ್ ಸಂಚಾರಕ್ಕೆ ಅಡ್ಡಿ ಪಡಿಸುವ ಕೆ ಪ್ರತಿದಿನ ತನ್ನ ಕಂಪನಿಯ ಕೆಲಸದ ನಂತರ ಕಾವಲು ಕಾಯುತ್ತಾರೆ.  ದಿಟ್ಟ ಯುವತಿ ಫುಟ್ ಪಾತ್ ಬಳಿ ನಿಲ್ಲುತ್ತಾ ಬೈಕ್ ಸವಾರರನ್ನು ರಸ್ತೆಯಲ್ಲಿ ಹೋಗಲು ಸೂಚನೆ ನೀಡುತ್ತಾರೆ. ಫುಟ್ ಪಾತ್ ಮೇಲೆಲ್ಲಾ ಬೈಕ್ ಸವಾರರು ಬರಬೇಡಿ ಎಂದು ಕಾಯುವ ಕೆಲಸ ಮಾಡುತ್ತಾರೆ.  ಬೆಂಗಳೂರಿನಲ್ಲಿ ನೆಲೆಸಿರುವ ಕೇರಳ ಮೂಲದ ಯುವತಿ ಕಾರ್ಯಕ್ಕೆ ಎಲ್ಲರಿಂದಲೂ ಕೂಡ ಮೆಚ್ಚುಗೆ ವ್ಯಕ್ತವಾಗುತ್ತಿದೆ.  ಸಾಮಾಜಿಕ ಜಾಲತಾಣದಲ್ಲಿ ಯುವತಿ ಮಂಜು ಥಾಮಸ್ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗುತ್ತಿದೆ.

 

loader