ಜಾತಿಗಳ ನಡುವೆ ಬೆಂಕಿ ಹಚ್ಚುತ್ತಿದ್ದಾರೆ ಸಿಎಂ : ಈಶ್ವರಪ್ಪ

First Published 20, Mar 2018, 1:02 PM IST
KS Eshwarappa Slams CM Siddaramaiah
Highlights

ಸಿಎಂ ಸಿದ್ದರಾಮಯ್ಯ ಜಾತಿಗಳ ನಡುವೆ ಬೆಂಕಿ ಹಚ್ಚುತ್ತಿದ್ದಾರೆ. ಈಗ ಯಶಸ್ವಿಯಾಗಿದ್ದಾರೆ.  ವೀರಶೈವ ಲಿಂಗಾಯತ ಎಂದು 2 ಗುಂಪಾಗಿ ಒಡೆದಿದ್ದಾರೆ ಎಂದು ಈಶ್ವರಪ್ಪ ಶಿವಮೊಗ್ಗದಲ್ಲಿ ಹೇಳಿದ್ದಾರೆ.

ಶಿವಮೊಗ್ಗ : ಸಿಎಂ ಸಿದ್ದರಾಮಯ್ಯ ಜಾತಿಗಳ ನಡುವೆ ಬೆಂಕಿ ಹಚ್ಚುತ್ತಿದ್ದಾರೆ. ಈಗ ಯಶಸ್ವಿಯಾಗಿದ್ದಾರೆ.  ವೀರಶೈವ ಲಿಂಗಾಯತ ಎಂದು 2 ಗುಂಪಾಗಿ ಒಡೆದಿದ್ದಾರೆ ಎಂದು ಈಶ್ವರಪ್ಪ ಶಿವಮೊಗ್ಗದಲ್ಲಿ ಹೇಳಿದ್ದಾರೆ.

ಈ ಮೂಲಕ ಸಿದ್ದರಾಮಯ್ಯ ಫೇಸ್ ವ್ಯಾಲ್ಯೂ ಕಳೆದುಕೊಂಡಿದ್ದಾರೆ. ಕುತಂತ್ರದ ರಾಜಕಾರಣಕ್ಕೆ ಚುನಾವಣೆಯಲ್ಲಿ ಜನರು ತಕ್ಕ ಪಾಠ ಕಲಿಸುತ್ತಾರೆ.

ಇದು ಕಾಂಗ್ರೆಸ್ ಸರ್ಕಾರದ ಅಂತ್ಯಕ್ಕೆ ಕಾರಣವಾಗುತ್ತದೆ. ಸಚಿವರಾದ ವಿನಯ್ ಕುಲಕರ್ಣಿ, ಮಲ್ಲಿಕಾರ್ಜುನ್ ಮಧ್ಯೆ ಭಿನ್ನಾಭಿಪ್ರಾಯವಿದೆ. ಸ್ವಾಮೀಜಿಗಳ ನಡುವೆಯೂ ಕೂಡ  ಭಿನ್ನಾಭಿಪ್ರಾಯ ಹುಟ್ಟು ಹಾಕಿದ್ದಾರೆ ಎಂದು ಈಶ್ವರಪ್ಪ ಹೇಳಿದ್ದಾರೆ.

loader