ಕಾಂಗ್ರೆಸ್ ವಾಟ್ಸಾಪ್ ಗ್ರೂಪ್’ನಲ್ಲಿ ತನ್ನದೇ ಅಶ್ಲೀಲ ಚಿತ್ರ ಹಾಕಿದ ಮುಖಂಡ

Karnataka Congress leader Allegedly posts Vulgar Image on WhatsApp group
Highlights

ಕಾರವಾರದಲ್ಲಿ ಕಾಂಗ್ರೆಸ್ ಮುಖಂಡನೊಬ್ಬ ವಾಟ್ಸ್ ಆಪ್ ನಲ್ಲಿ ತನ್ನದೇ ಅಶ್ಲೀಲ ಚಿತ್ರಗಳನ್ನ ಹರಿಬಿಟ್ಟು ಸುದ್ದಿಯಾಗಿದ್ದಾನೆ.

ಕಾರವಾರ : ಕಾರವಾರದಲ್ಲಿ ಕಾಂಗ್ರೆಸ್ ಮುಖಂಡನೊಬ್ಬ ವಾಟ್ಸ್ ಆಪ್ ನಲ್ಲಿ ತನ್ನದೇ ಅಶ್ಲೀಲ ಚಿತ್ರಗಳನ್ನ ಹರಿಬಿಟ್ಟು ಸುದ್ದಿಯಾಗಿದ್ದಾನೆ.

ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಕಾಂಗ್ರೆಸ್ ಪುರಸಭಾ ಮಾಜಿ ಅಧ್ಯಕ್ಷ ಹಾಗೂ ಹಾಲಿ ಪುರಸಭಾ ಸದಸ್ಯ  ರಾಜು ರುದ್ರಪಾಟಿ ಎಂಬಾತ ದಾಂಡೇಲಿ ಕಾಂಗ್ರೇಸ್ ಎಂಬ ಕಾಂಗ್ರೆಸ್ ಮುಖಂಡರಿರುವ ಗ್ರೂಪ್’ಗೆ ತನ್ನ ಅಶ್ಲೀಲ ಪೋಟೋ ಅಪ್ ಲೋಡ್ ಮಾಡಿದ್ದಾನೆ.

ಸ್ವತಃ ತನ್ನ ಮಗ ಯುವ ಕಾಂಗ್ರೇಸ್ ಅಧ್ಯಕ್ಷ ರಾಜೇಶ್ ,ದಲಿತ ಮೋರ್ಚಾ ತಾಲೂಕು ಅಧ್ಯಕ್ಷ ಅವಿನಾಶ್ ಕೊಡಕೆ ,ಜಿಲ್ಲಾ ಮಾಧ್ಯಮ ವಕ್ತಾರ ವೀರೇಶ್ ಎರಗೇರಿ ಅಡ್ಮಿನ್ ಆಗಿರುವ ಈ ಗ್ರೂಪ್ ಗೆ ಮಾರ್ಚ 16 ರಂದು ಸೆಂಡ್ ಮಾಡಿದ್ದಾನೆ .ತಕ್ಷಣ ಎಚ್ಚೆತ್ತ ಗ್ರೂಪ್ ಅಡ್ಮಿನ್ ಗಳು ಗ್ರೂಪ್ ಅನ್ನು ಡಿಲೀಟ್ ಮಾಡಿದ್ದಾರೆ .

ನಡೆದ ಅಚಾತುರ್ಯವನ್ನು ಮುಚ್ಚಿಹಾಕುವ ಪ್ರಯತ್ನ ಮಾಡಿದ್ದಲ್ಲದೇ  ಗ್ರೂಪ್ ಸದಸ್ಯರಿಗೆ ಮನವಿ ಮಾಡಿಕೊಂಡಿದ್ದರಿಂದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

loader