Asianet Suvarna News Asianet Suvarna News

ಅಜ್ಜಂಪುರ ತಾಲೂಕು: ಕಡೂರು ಆಕ್ಷೇಪ

ಅಜ್ಜಂಪುರ ತಾಲೂಕಿಗೆ ಸೇರಿಸಲು ಗುರುತಿಸಿರುವ ಕಡೂರು ತಾಲೂಕಿನ ಕೆಲವು ಗ್ರಾಮಗಳ ಬಗ್ಗೆ ಮರು ಪರಿಶೀಲಿಸುವಂತೆ ಶಾಸಕ ವೈಎಸ್‌ವಿ ದತ್ತ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಜಿಲ್ಲಾಡಳಿತವನ್ನು ಆಗ್ರ ಹಿಸಿದರು.

Kaduru Opposes for making Ajjampura Taluku

ಚಿಕ್ಕಮಗಳೂರು (ನ.03): ಅಜ್ಜಂಪುರ ತಾಲೂಕಿಗೆ ಸೇರಿಸಲು ಗುರುತಿಸಿರುವ ಕಡೂರು ತಾಲೂಕಿನ ಕೆಲವು ಗ್ರಾಮಗಳ ಬಗ್ಗೆ ಮರು ಪರಿಶೀಲಿಸುವಂತೆ ಶಾಸಕ ವೈಎಸ್‌ವಿ ದತ್ತ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಜಿಲ್ಲಾಡಳಿತವನ್ನು ಆಗ್ರ ಹಿಸಿದರು.

ನೂತನ ತಾಲೂಕು ರಚನೆ ಸಮಿತಿ ಶಿಫಾರಸ್ಸಿಲ್ಲದೆ ಘೋಷಿಸಿರುವ ೯ ತಾಲೂಕುಗಳಲ್ಲಿ ಅಜ್ಜಂಪುರವೂ ಒಂದಾಗಿದ್ದು, ಸ್ಥಳೀಯ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರ ಉಪಸ್ಥಿತಿಯಲ್ಲಿ ಸಭೆ ಕರೆದು ಶಿಫಾರಸು ಮಾಡುವಂತೆ ಕಂದಾಯ ಇಲಾಖೆ ಕಳೆದ ಸೆಪ್ಟಂಬರ್ 8 ರಂದು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಡಿಸಿ ಶ್ರೀರಂಗಯ್ಯ ಅಧ್ಯ ಕ್ಷತೆಯಲ್ಲಿ ಗುರುವಾರ ನಡೆದ ಅಜ್ಜಂಪುರ ತಾಲೂಕು ರಚನೆ ಕುರಿತ ಸಭೆಯಲ್ಲಿ ಕಡೂರು, ತರೀಕೆರೆ ಕ್ಷೇತ್ರಗಳ ಶಾಸಕರು, ಜಿಪಂ ಸದಸ್ಯರು ಪಾಲ್ಗೊಂಡಿದ್ದರು. ಕಡೂರು ತಾಲೂಕಿನ ಜಿಪಂ ಸದಸ್ಯರಾದ ಕಾವೇರಿ ಲಕ್ಕಪ್ಪ, ವನಮಾಲ ದೇವರಾಜ್ ಹಾಗೂ ಮಹೇಶ್ ಒಡೆಯರ್ ಅಜ್ಜಂಪುರ ತಾಲೂಕಿಗೆ ಕಡೂರು ತಾಲೂಕಿನ ಕೆಲವು ಪ್ರದೇಶಗಳು ಸೇರಿಸುವುದರಿಂದ ಆಗುವ ಅನಾನುಕೂಲದ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ಹಿರೇನಲ್ಲೂರು ಹೋಬಳಿಯ ವ್ಯಾಪ್ತಿಗೆ ಬರುವ ಬಿಸಲೇರೆ, ಬಾಸೂರು, ಕಾಮನ ಕೆರೆ, ಹಿರೇನಲ್ಲೂರು ಗ್ರಾಪಂ ವ್ಯಾಪ್ತಿಯಲ್ಲಿ ರುವ ಹಳ್ಳಿಗಳು ಕಡೂರು ತಾಲೂಕು ಕೇಂದ್ರದ 7-8  ಕಿ.ಮೀ. ಅಂತರದಲ್ಲಿವೆ. ಚೌಳಹಿರಿಯೂರಿನ ಕೆ. ಜೋಪನಹಳ್ಳಿಯೂ ಕೂಡ ಕಡೂರು ಸಮೀಪದಲ್ಲಿರುವುದರಿಂದ ಈ ಎಲ್ಲಾ ಗ್ರಾಮಗಳನ್ನು ಅಜ್ಜಂಪುರ ತಾಲೂಕಿಗೆ ಸೇರ್ಪಡೆ ಮಾಡಬಾರದು ಎಂದು ಮನವಿ ಮಾಡಿದರು.

ಮಾತನಾಡಿದ ಶಾಸಕ ವೈಎಸ್‌ವಿ ದತ್ತ, ಅಜ್ಜಂಪುರ ಹಾಗೂ ಕಡೂರು ತಾಲೂಕುಗಳಿಗೆ ಈಗಿರುವ ಹಳ್ಳಿಗಳ ಅಂತರದ ಬಗ್ಗೆ ಲೋಕೋಪಯೋಗಿ ಇಲಾಖೆ ಕೊಟ್ಟಿರುವ ವರದಿ ಸರಿ ಇಲ್ಲ. ಈ ಲೆಕ್ಕಚಾರ ಸರಿಪಡಿಸಬೇಕು. ಅದರಲ್ಲಿ ವೈಜ್ಞಾನಿಕ ಮಾನದಂಡ ಇದ್ದರೆ ಮಾತ್ರ ಒಪ್ಪಿಕೊಳ್ಳಲು ಸಾಧ್ಯ. ಈ ಕೆಲಸ ಆದಷ್ಟು ಬೇಗ ಆಗಬೇಕು ಎಂದು ಹೇಳಿದರು. ಅಜ್ಜಂಪುರ ಪೊಲೀಸ್ ಠಾಣೆಯ ಸರ ಹದ್ದಿನಲ್ಲಿರುವ ಕಡೂರು ತಾಲೂಕಿನ ಕೆಲವು ಗ್ರಾಮಗಳನ್ನು ಅಜ್ಜಂಪುರ ತಾಲೂಕಿಗೆ ಸೇರಿಸಲು ನಮ್ಮ ಜನರ ಅಭ್ಯಂತರ ಇಲ್ಲ. ಹಿರೇನಲ್ಲೂರು ಹೋಬಳಿಯ 4 ಗ್ರಾಪಂ ಹಳ್ಳಿಗಳನ್ನು ಸೇರಿಸಿಕೊಳ್ಳುವುದರ ಬಗ್ಗೆ ನಮ್ಮ ಆಕ್ಷೇಪ ಇದೆ ಎಂದರು. ಅಜ್ಜಂಪುರ ಹೊಸ ತಾಲೂಕು ಮಾಡಿರು ವುದಕ್ಕೆ ನಮ್ಮ ಸ್ವಾಗತವಿದೆ. ಆದರೆ, ಕಡೂರು ಭಾಗದ ಜನರಿಗೆ ತೊಂದರೆಯಾಗಬಾರದು, ಆಗಿರುವ ದೋಷವನ್ನು ಕೂಡಲೇ ಸರಿ ಪಡಿಸಿ ಮತ್ತೊಮ್ಮೆ ಸಭೆ ಕರೆಯಬೇಕು ಎಂದು ಹೇಳಿದರು. ಅಜ್ಜಂಪುರ ತಾಲೂಕು ಘೋಷಣೆ ಮಾಡಿರುವ ಮುಖ್ಯಮಂತ್ರಿಯವರಿಗೆ ಅಭಿನಂದನೆ ತಿಳಿಸಿ ಮಾತು ಆರಂಭಿಸಿದ ತರೀಕೆರೆ ಶಾಸಕ ಶ್ರೀನಿವಾಸ್, ಹೊಸ ತಾಲೂಕುಗಳಿಗೆ ಗ್ರಾಮಗಳ ಸೇರ್ಪಡೆ ವರದಿ ತಡವಾಗಿ ಸರ್ಕಾರಕ್ಕೆ ಹೋಗಿದ್ದರ ಪರಿಣಾಮ ಅದು ವಾಪಸ್ ಬಂದಿದೆ. ಈ ತಪ್ಪು ಜಿಲ್ಲಾಡಳಿತದಿಂದ ನಡೆದಿದೆ ಎಂದರು. ಬಸ್ಸುಗಳು ಸಂಚರಿಸುವ ರಸ್ತೆಗಳ ದೂರದ ಆಧಾರದ ಮೇಲೆ ತಾಲೂಕು ಕೇಂದ್ರಗಳನ್ನು ಪರಿಗಣಿಸಲಾಗಿದೆ. ಈ ಆಧಾರದ ಮೇಲೆ ವರದಿ ಸಲ್ಲಿಸಲಾಗಿದೆ. ಆದರೂ ಜನಕ್ಕೆ ತೊಂದರೆಯಾಗಬಾರದು. ಕೂಡಲೇ ಅಂತಿಮ ತೀರ್ಮಾನ ತೆಗೆದುಕೊಂಡು ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ಜನ ವರಿ ೧ರಂದು ಅಜ್ಜಂಪುರ ನೂತನ ತಾಲೂ ಕಿನ ಕಚೇರಿಗಳು ಕೆಲಸ ಆರಂಭಿಸಬೇಕು ಎಂದು ಹೇಳಿದರು. ಅಜ್ಜಂಪುರ ಅಮೃತ್ ಮಹಲ್ ಕಾವಲಿಗೆ ಸೇರಿರುವ ಕೆಲವು ಪ್ರದೇಶವನ್ನು ವಶಕ್ಕೆ ತೆಗೆದುಕೊಂಡು ಅಲ್ಲಿ ಸರ್ಕಾರಿ ನೌಕರರ ವಸತಿ ಗೃಹಗಳ ಕಟ್ಟಡ ನಿರ್ಮಾಣ ಮಾಡ ಬೇಕು. ಇಲ್ಲೇ ಸಮೀಪದ ಸರ್ವೆ ನಂಬರ್ 155 ರಲ್ಲಿರುವ 4 ಎಕರೆ ಖರಾಬ್ ಜಾಗ ಬೇರೆಯವರು ಅನುಭವಿಸುತ್ತಿದ್ದಾರೆ. ಅದನ್ನು ಕೂಡಲೇ ವಶಕ್ಕೆ ತೆಗೆದುಕೊಂಡು, ಅಲ್ಲಿ ಮಿನಿ ವಿಧಾನಸೌಧ ಕಟ್ಟಡ ನಿರ್ಮಿ ಸಬೇಕು, ಅದಕ್ಕೆ ಬೇಕಾದ ಅನುದಾನವನ್ನು ರಾಜ್ಯ ಸರ್ಕಾರ ಕೊಡಲು ಸಿದ್ಧವಿದೆ ಎಂದರು. 

Follow Us:
Download App:
  • android
  • ios