ಕಾಂಗ್ರೆಸ್ ಸೇರಲಿದ್ದಾರೆ ಬಂಡಾಯ ಶಾಸಕರು : ಸಿಎಂ

First Published 25, Mar 2018, 12:50 PM IST
JDS Rebel MLAs Join Congress
Highlights

ಜೆಡಿಎಸ್ ಬಂಡಾಯ ಶಾಸಕರು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಮೈಸೂರು : ಜೆಡಿಎಸ್ ಬಂಡಾಯ ಶಾಸಕರು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.  ಮಾಜಿ ಸಚಿವ ಎಂ.ಸಿ.‌ನಾಣಯ್ಯ ಇಂದು ಕಾಂಗ್ರೆಸ್ ಸೇರಲಿದ್ದಾರೆ ಎಂದು ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ‌

ಬಂಡಾಯ ಶಾಸಕರು ಪಕ್ಷ ಸೇರುವುದರಿಂದ ಸಹಜವಾಗಿಯೇ ಪಕ್ಷದ ಬಲ ಹೆಚ್ಚಲಿದೆ. ಇದರೊಂದಿಗೆ ಅತ್ಯುತ್ತಮ ಸಂಸದೀಯ ಪಟು ಎಂ.ಸಿ.ನಾಣಯ್ಯ ಅವರೂ ಪಕ್ಷಕ್ಕೆ ಸೇರಲಿದ್ದಾರೆ ಎಂದಿದ್ದಾರೆ.

ನಿನ್ನೆ ಚಾಮರಾಜನಗರದಲ್ಲಿ ಮಾಜಿ ಶಾಸಕ ಎ.ಆರ್.ಕೃಷ್ಣಮೂರ್ತಿ ಪಕ್ಷ ಸೇರಿದ್ದಾರೆ. ಇಂದು ಬಂಡಾಯ ಶಾಸಕರು ಸೇರ್ಪಡೆಯಾಗುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

loader