Asianet Suvarna News Asianet Suvarna News

1 ಬಾಟಲ್‌ ನೀರಿಗೆ ರೂ. 50: ಬೆಳಗಾವಿ ಐನಾಕ್ಸ್‌ಗೆ ಬೀಗ!

ನಿಗದಿತ ದರಕ್ಕಿಂತ ದುಪ್ಪಟ್ಟು ದರದಲ್ಲಿ ಕುಡಿವ ನೀರಿನ ಬಾಟಲ್ ಮತ್ತು ತಿಂಡಿಗಳನ್ನು ಮಾರಾಟ ಮಾಡುತ್ತಿದ್ದ ಹಿನ್ನೆಲೆಯಲ್ಲಿ ನಗರದ ಮಲ್ಟಿಪ್ಲೆಕ್ಸ್ ಚಿತ್ರಮಂದಿರವಾದ ಐನಾಕ್ಸ್ ಮೇಲೆ ಗುರುವಾರ ದಾಳಿ ನಡೆಸಿದ ಉಪವಿಭಾಗಾಧಿಕಾರಿ ಕವಿತಾ ಮತ್ತು ತಹಸೀಲ್ದಾರ್ ಗಿರೀಶ ಸ್ವಾದಿ ಅವರು ಚಿತ್ರಮಂದಿರಕ್ಕೆ ಬೀಗ ಜಡಿದಿದ್ದಾರೆ.

inox closed for taking wxtra money on drinking water
  • Facebook
  • Twitter
  • Whatsapp

ಬೆಳಗಾವಿ(ಮೇ.19): ನಿಗದಿತ ದರಕ್ಕಿಂತ ದುಪ್ಪಟ್ಟು ದರದಲ್ಲಿ ಕುಡಿವ ನೀರಿನ ಬಾಟಲ್ ಮತ್ತು ತಿಂಡಿಗಳನ್ನು ಮಾರಾಟ ಮಾಡುತ್ತಿದ್ದ ಹಿನ್ನೆಲೆಯಲ್ಲಿ ನಗರದ ಮಲ್ಟಿಪ್ಲೆಕ್ಸ್ ಚಿತ್ರಮಂದಿರವಾದ ಐನಾಕ್ಸ್ ಮೇಲೆ ಗುರುವಾರ ದಾಳಿ ನಡೆಸಿದ ಉಪವಿಭಾಗಾಧಿಕಾರಿ ಕವಿತಾ ಮತ್ತು ತಹಸೀಲ್ದಾರ್ ಗಿರೀಶ ಸ್ವಾದಿ ಅವರು ಚಿತ್ರಮಂದಿರಕ್ಕೆ ಬೀಗ ಜಡಿದಿದ್ದಾರೆ.

ಈ ಕುರಿತು ಸಾರ್ವಜನಿಕರಿಂದ ಜಿಲ್ಲಾಧಿಕಾರಿ ಎನ್.ಜಯರಾಂ ಅವರಿಗೆ ದೂರು ಬಂದಿತ್ತು. ಈ ಕುರಿತು ಪರಿಶೀಲನೆ ನಡೆಸಿ ವರದಿ ನೀಡುವಂತೆ ಜಿಲ್ಲಾಧಿಕಾರಿಗಳು ಎಸಿ ಮತ್ತು ತಹಸೀಲ್ದಾರರಿಗೆ ಸೂಚನೆ ನೀಡಿದ್ದರು. 

ಅದರಂತೆ ಗುರುವಾರ ಪ್ರೇಕ್ಷಕರಂತೆ ಸರದಿಯಲ್ಲಿ ನಿಂತು ಟಿಕೆಟ್ ಪಡೆದ ಅಧಿಕಾರಿಗಳ ತಂಡ ಚಿತ್ರಮಂದಿರ ಪ್ರವೇಶಿಸಿತ್ತು. ಅಲ್ಲಿನ ಸುಲಿಗೆ ಕೃತ್ಯ ಕಂಡು ಪ್ರಶ್ನಿಸಿದಾಗ ಅಲ್ಲಿನ ಸಿಬ್ಬಂದಿಯ ದರ್ಪದ ನಡೆ ಕಂಡು ದಂಗಾದರು. ಈ ಕುರಿತು ದೂರವಾಣಿ ಮೂಲಕ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ಜಿಲ್ಲಾಧಿಕಾರಿಗಳು, ತಕ್ಷಣವೇ ಕ್ರಮಕ್ಕೆ ಮುಂದಾಗುವಂತೆ ಸೂಚಿಸಿದರು. ಅದರಂತೆ ಚಿತ್ರಮಂದಿರಕ್ಕೆ ಬೀಗ ಜಡಿದರು.

.20 ಮೌಲ್ಯದ 1 ಲೀಟರ್ನ ಕುಡಿವ ನೀರಿನ ಬಾಟಲಿಗೆ .50, .10, 20 ಮೌಲ್ಯದ ತಿಂಡಿಗಳಿಗೆ .40, .60 ಮೌಲ್ಯದ ತಿಂಡಿಗಳನ್ನು .100ಕ್ಕೆ ಮಾರಾಟ ಮಾಡುತ್ತಿದ್ದು ಕಂಡುಬಂತು. ಅಲ್ಲದೇ ಆಹಾರ ತಿಂಡಿಗಳ ಪ್ಯಾಕೇಜ್ ಸೃಷ್ಟಿಸಿ ಅದರಲ್ಲೂ ವಸೂಲಿ ಮಾಡುತ್ತಿದ್ದುದು ಕಂಡು ಬಂದ ಹಿನ್ನೆಲೆಯಲ್ಲಿ ಚಿತ್ರಮಂದಿರಕ್ಕೆ ಬೀಗ ಜಡಿಯಲಾಗಿದೆ ಎಂದು ಎಸಿ ಕವಿತಾ ತಿಳಿಸಿದ್ದಾರೆ.

 

Follow Us:
Download App:
  • android
  • ios