ಇಂದಿರಾ ಕ್ಯಾಂಟೀನ್‌ ಸ್ಲಾಬ್‌ ಕುಸಿದು ಕಾರ್ಮಿಕ ಸಾವು

Indira Canteen Slab Collapse One Dead
Highlights

ಇಂದಿರಾ ಕ್ಯಾಂಟೀನ್‌ ಕಟ್ಟಡ ಕಾಮಗಾರಿ ನಡೆಯುತ್ತಿದ್ದ ಸಂದರ್ಭದಲ್ಲಿ ಸಿಮೆಂಟ್‌ ಸ್ಲಾಬ್‌ ಕುಸಿದು ಕೂಲಿ ಕಾರ್ಮಿಕನೊಬ್ಬ ಮೃತಪಟ್ಟಘಟನೆ ಪಟ್ಟಣದಲ್ಲಿ ಮಂಗಳವಾರ ನಡೆದಿದೆ.

ಸಕಲೇಶಪುರ: ಇಂದಿರಾ ಕ್ಯಾಂಟೀನ್‌ ಕಟ್ಟಡ ಕಾಮಗಾರಿ ನಡೆಯುತ್ತಿದ್ದ ಸಂದರ್ಭದಲ್ಲಿ ಸಿಮೆಂಟ್‌ ಸ್ಲಾಬ್‌ ಕುಸಿದು ಕೂಲಿ ಕಾರ್ಮಿಕನೊಬ್ಬ ಮೃತಪಟ್ಟಘಟನೆ ಪಟ್ಟಣದಲ್ಲಿ ಮಂಗಳವಾರ ನಡೆದಿದೆ. ಬಿಹಾರ ರಾಜ್ಯದ ಗಯಾ ಜಿಲ್ಲೆಯ ಗುರಾರ್‌ ತಾಲೂಕಿನ ಆಸಿಫ್‌(20) ಮೃತ ಪಟ್ಟಿರುವ ದುರ್ದೈವಿಯಾಗಿದ್ದು ಗುತ್ತಿಗೆದಾರ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎನ್ನವಾಗಿದೆ.

ಆಸಿಫ್‌ ಪಟ್ಟಣದ ಮಿನಿ ವಿಧಾನಸೌಧದ ಮುಂಭಾಗದಲ್ಲಿ ನಿರ್ಮಾಣ ಹಂತದಲ್ಲಿರುವ ಇಂದಿರಾ ಕ್ಯಾಂಟೀನ್‌ನಲ್ಲಿ ರಾತ್ರಿ ಹತ್ತು ಘಂಟೆ ಸಮಯದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಕ್ರೇನ್‌ ಮೂಲಕ ನಿಲ್ಲಿಸಿದ್ದ ಸಿಮೇಂಟ್‌ ಸ್ಲಾಬ್‌ ಮೈಮೇಲೆ ಬಿದ್ದು ಸ್ಥಳದಲ್ಲಿ ಮೃತ ಪಟ್ಟಿದ್ದಾನೆ.

ಘಟನೆ ನಡೆದ ಸ್ಥಳದಲ್ಲಿ ಗುತ್ತಿಗೆದಾರ, ಎಂಜಿನಿಯರ್‌ ಮತ್ತು ಮೇಲ್ವಿಚಾರಕ ಇಲ್ಲದೆ ಇರುವುದು ಅವಘಡಕ್ಕೆ ಕಾರಣವಾಗಿದ್ದು ಕೂಡಲೇ ಸಂಬಂಧಪಟ್ಟಅಧಿಕಾರಿಗಳನ್ನು ಕರ್ತವ್ಯದಿಂದ ಅಮಾನತುಗೊಳಿಸಿ ಮೃತನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಕಾರ್ಮಿಕರು ಒತ್ತಾಯಿಸಿದರು.

loader