ಪಿಯು ಇಂಗ್ಲೀಷ್ ಪ್ರಶ್ನೆ ಪತ್ರಿಕೆ ದೋಷ : ಕೃಪಾಂಕಕ್ಕೆ ಆಗ್ರಹ

First Published 20, Mar 2018, 11:15 AM IST
II PU English exam blunder
Highlights

ಸಾಕಷ್ಟು ಲೋಪದಿಂದ ಕೂಡಿದ್ದ ದ್ವಿತೀಯ ಪಿಯುಸಿ ಇಂಗ್ಲಿಷ್ ಭಾಷಾ ಪ್ರಶ್ನೆಪತ್ರಿಕೆಯನ್ನು ವಿದ್ಯಾರ್ಥಿಗಳು ಅರ್ಥೈಸಿಕೊಳ್ಳುವುದೇ ಕಷ್ಟವಾಗಿದ್ದು, ಉತ್ತರಿಸಲು ಪರದಾಡಿದ್ದಾರೆ.

ಬೆಂಗಳೂರು: ಸಾಕಷ್ಟು ಲೋಪದಿಂದ ಕೂಡಿದ್ದ ದ್ವಿತೀಯ ಪಿಯುಸಿ ಇಂಗ್ಲಿಷ್ ಭಾಷಾ ಪ್ರಶ್ನೆಪತ್ರಿಕೆಯನ್ನು ವಿದ್ಯಾರ್ಥಿಗಳು ಅರ್ಥೈಸಿಕೊಳ್ಳುವುದೇ ಕಷ್ಟವಾಗಿದ್ದು, ಉತ್ತರಿಸಲು ಪರದಾಡಿದ್ದಾರೆ. ಇದು ಫಲಿತಾಂಶದ ಮೇಲೆ ಗಂಭೀರ ಪರಿಣಾಮ ಬೀರುವುದರಿಂದ ಕೃಪಾಂಕ ನೀಡಬೇಕೆಂದುವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಆಗ್ರಹಿಸಿದ್ದಾರೆ.

ಪರೀಕ್ಷೆಯ ಕೊನೆಯ ದಿನವಾಗಿದ್ದ ಮಾ.17ರಂದು ದ್ವಿತೀಯ ಪಿಯುಸಿ ಇಂಗ್ಲಿಷ್ ಭಾಷಾ ವಿಷಯ ಪರೀಕ್ಷೆ ನಡೆದಿತ್ತು. ಇದರಲ್ಲಿ ಅಂದಾಜು ಶೇ.30ಕ್ಕಿಂತ ಹೆಚ್ಚಿನ ಪ್ರಶ್ನೆಗಳು ವ್ಯಾಕರಣ ದೋಷದಿಂದ ಕೂಡಿದ್ದು, ಪ್ರಶ್ನೆಗಳೇ ಅರ್ಥವಾಗಿಲ್ಲವೆಂದು ಆರೋಪಿಸಿದ್ದಾರೆ.

ಪದ್ಯದಲ್ಲಿ ಬರುವ ‘ಡಿಟಡಿ’ ಎಂಬ ಪದ ಯಾವ ಅರ್ಥ ಸೂಚಿಸುತ್ತದೆ ಎಂದು ಕೇಳಲಾಗಿದೆ. ಆದರೆ, ಇದು ಡಿಟಡಿ ಬದಲು ‘ಚಿಟಡಿ’ ಎಂದಾಗಬೇಕಿತ್ತು. ವಿಜಯನಗರ ಸಾಮ್ರಾಜ್ಯದ ಕೃಷ್ಣದೇವರಾಯನ ಆಳ್ವಿಕೆ ಸಂದರ್ಭದಲ್ಲಿ ಅಷ್ಟ ದಿಗ್ಗಜರಲ್ಲಿ ಒಬ್ಬರಾಗಿದ್ದ ತೆನಾಲಿ ರಾಮಕೃಷ್ಣನನ್ನು ಪ್ರಶ್ನೆ ಪತ್ರಿಕೆಯಲ್ಲಿ ಒಬ್ಬ ‘ಹಾಸ್ಯಗಾರ’ ಎಂದು ಮುದ್ರಿಸಲಾಗಿದೆ. ಒಬ್ಬ ಬುದ್ಧಿ ವಂತನನ್ನು ಹಾಸ್ಯಗಾರ ಎಂದು ನೀಡಿರುವುದಕ್ಕೆ ಟೀಕೆ ವ್ಯಕ್ತವಾಗಿದೆ. ಇದೇ ರೀತಿ ಹಲವಾರು ತಪ್ಪುಗಳಿಂದ ಮುದ್ರಣಗೊಂಡಿವೆ.

loader