ಚಾರ್ಮಾಡಿ ಘಾಟ್‌ನಲ್ಲಿ ಮೂಡಿಗೆರೆಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ವಾಹನದಲ್ಲಿ ಆರು ಹಸುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದು, ಪೊಲೀಸರು ಹಾಗೂ ಹಿಂದು ಪರ ಸಂಘಟನೆಗಳ ಕಾರ್ಯಕರ್ತರು ಬೆನ್ನಟ್ಟಿದಾಗ, ಹಸುಕಳ್ಳರು ವಾಹನ ಸ್ಥಳದಲ್ಲಿ ಬಿಟ್ಟು ಚಾಲಕ ಮತ್ತು ಇತರರು ಪರಾರಿಯಾಗಿದ್ದಾರೆ.

ಮೂಡಿಗೆರೆ(ಅ.27): ಚಾರ್ಮಾಡಿ ಘಾಟ್‌ನಲ್ಲಿ ಮೂಡಿಗೆರೆಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ವಾಹನದಲ್ಲಿ ಆರು ಹಸುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದು, ಪೊಲೀಸರು ಹಾಗೂ ಹಿಂದು ಪರ ಸಂಘಟನೆಗಳ ಕಾರ್ಯಕರ್ತರು ಬೆನ್ನಟ್ಟಿದಾಗ, ಹಸುಕಳ್ಳರು ವಾಹನ ಸ್ಥಳದಲ್ಲಿ ಬಿಟ್ಟು ಚಾಲಕ ಮತ್ತು ಇತರರು ಪರಾರಿಯಾಗಿದ್ದಾರೆ.

ವಾಹನದಲ್ಲಿ 5 ಹಸುಗಳು ಸುರಕ್ಷಿತವಾಗಿದ್ದು 1 ಹಸು ಮೃತಪಟ್ಟಿದೆ. ಈ ಪ್ರದೇಶ ದಕ್ಷಿಣ ಕನ್ನಡ ಜಿಲ್ಲೆಗೆ ಸೇರುವುದರಿಂದ ಧರ್ಮಸ್ಥಳ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ, ವಾಹನ ವಶಕ್ಕೆ ಪಡೆದು ತನಿಖೆ ನಡೆಸಿದ್ದಾರೆ.

ಕೊಟ್ಟಿಗೆಹಾರದಲ್ಲಿ ಪೊಲೀಸ್ ಉಪಠಾಣೆ ಅಥವಾ ಚೌಕಿಯಾದರೆ ಅಕ್ರಮ ಚಟುವಟಿಕೆ ನಿಯಂತ್ರಿಸಬಹುದು. ಕೊಟ್ಟಿಗೆಹಾರದಲ್ಲಿ ಅರಣ್ಯ ತಪಾಸಣೆ ಗೇಟ್‌ಗಿಂತ ಸ್ವಲ್ಪ ದೂರದಲ್ಲಿ ಪೊಲೀಸ್ ಚೌಕಿ ಸ್ಥಾಪಿಸಿದರೆ ಒಳ್ಳೆಯ ಕ್ರಮ ಎಂದು ಈ ಭಾಗದ ಜನತೆ ಅಭಿಪ್ರಾಯ ಪಟ್ಟಿದ್ದಾರೆ.