ಜಿಲ್ಲೆಯಲ್ಲಿ ಸೆಸ್ಕಾಂ ಇಲಾಖೆ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ರೈತರಿಂದ ಲಕ್ಷಾಂತರ ರು. ಲಂಚ ಪಡೆದು ಜೈಲಿಗೆ ಹೋಗಿದ್ದ ಇಲಾಖೆ ಕಿರಿಯ ಎಂಜಿನಿಯರ್‌ರನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳಲಾಗಿದೆ. ಕೂಡಲೇ ಚೆಸ್ಕಾಂ ಅಧಿಕಾರಿಗಳ ವಿರುದ್ಧ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ಜೆಡಿಎಸ್‌ ಮುಖಂಡ ಮಾಜಿ ಸಚಿವ ಎಚ್‌ ಡಿ ರೇವಣ್ಣ ಆಗ್ರಹಿಸಿದ್ದಾರೆ. 

ಹಾಸನ (ಮೇ.09): ಜಿಲ್ಲೆಯಲ್ಲಿಸೆಸ್ಕಾಂ ಇಲಾಖೆ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ರೈತರಿಂದ ಲಕ್ಷಾಂತರ ರು. ಲಂಚ ಪಡೆದು ಜೈಲಿಗೆ ಹೋಗಿದ್ದ ಇಲಾಖೆ ಕಿರಿಯ ಎಂಜಿನಿಯರ್‌ರನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳಲಾಗಿದೆ. ಕೂಡಲೇ ಚೆಸ್ಕಾಂ ಅಧಿಕಾರಿಗಳ ವಿರುದ್ಧ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ಜೆಡಿಎಸ್‌ ಮುಖಂಡ ಮಾಜಿ ಸಚಿವ ಎಚ್‌ ಡಿ ರೇವಣ್ಣ ಆಗ್ರಹಿಸಿದ್ದಾರೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರನ್ನು ರಕ್ತ ವನ್ನು ಹೀರುತ್ತಿರುವ ಭ್ರಷ್ಟರ ವಿರುದ್ಧ ಕ್ರಮ ತೆಗೆದುಕೊಳ್ಳದಿದ್ದರೇ ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು. ಹೊಳೆನರಸೀಪುರ ತಾಲೂಕು ಚೆಸ್ಕಾಂ ಕಿರಿಯ ಎಂಜಿನಿಯರ್‌ ಶ್ರೀರಂಗ ಎಂಬು ವರು ಸುಮಾರು 70 ರಿಂದ 80 ಮಂದಿ ರೈತರಿಂದ ಬೋರ್‌ವೆಲ್‌ಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಲು ತಲಾ 10 ರಿಂದ 15 ಸಾವಿರ ಲಂಚ ಪಡೆದಿದ್ದಾರೆ. ಹಣ ಪಡೆ ದರೂ ವಿದ್ಯುತ್‌ ಸಂಪರ್ಕ ನೀಡಿಲ್ಲ. ಈ ಬಗ್ಗೆ 48 ರೈತರು ಎಂಜಿನಿಯರ್‌ ವಿರುದ್ಧ ಪೊಲೀಸ್‌ ಠಾಣೆಗೆ ಲಿಖಿತ ದೂರು ನೀಡಿ ದರು. ನಂತರ ಅವರನ್ನು ಜೈಲಿಗೆ ಕಳು ಹಿಸಲಾಯಿತು ಎಂದು ತಿಳಿಸಿದರು. ಆದರೆ ಆತನ ವಿರುದ್ಧ ನ್ಯಾಯಾಲಯಕ್ಕೆ ನಿಗದಿತ ಸಮಯಕ್ಕೆ ಆರೋಪ ಪಟ್ಟಿ(ಜಾರ್ಜ ಶೀಟ್‌ ) ಸಲ್ಲಿಸಲಿಲ್ಲ ಮತ್ತು ಅಮಾನತು ಆದ 6 ತಿಂಗಳೊಳಿಗೆ ಕೆಲಸ ತೆಗೆದುಕೊಳ್ಳಬೇಕೆಂದು ನೆಪವೊಡ್ಡಿ ಭ್ರಷ್ಟಎಂಜಿನಿಯರ್‌ಅನ್ನು ಮತ್ತೆ ಕೆಲಸಕ್ಕೆ ತೆಗೆದು ಕೊಳ್ಳಲಾಗಿದೆ. ರೈತರು ಬೋರ್‌ ವೆಲ್‌ಗೆ ವಿದ್ಯುತ್‌ ಸಂಪರ್ಕ ಪಡೆದುಕೊಂಡು ಬೆಳೆ ಬೆಳೆಯಬೇಕೆಂಬ ಆಸೆಯಿಂದ ಎಂಜಿನಿ ಯರ್‌ಗೆ ಮೀಟರ್‌ ಬಡ್ಡಿಗೆ ಸಾಲ ಮಾಡಿ ಕೊಟ್ಟಿದ್ದಾರೆ. ಆದರೆ, ಇತ್ತ ವಿದ್ಯುತ್‌ ಸಂಪರ್ಕವೂ ಇಲ್ಲ, ಹಣವೂ ಇಲ್ಲದೇ ರೈತರು ಆತ್ಮಹತ್ಯೆ ದಾರಿ ಹಿಡಿಯಬೇಕಾದ ದುಸ್ಥಿತಿ ಎರಗಿದೆ ಎಂದು ಕಿಡಿಕಾರಿದರು.

15 ಸಾವಿರ ಟಿಸಿಗಳು: ತಾವು ಇಂಧನ ಸಚಿವರಾಗಿದ್ದಾಗ ಜಿಲ್ಲೆಯಲ್ಲಿ 20 ಸಾವಿರ ವಿದ್ಯುತ್‌ ಟ್ರಾನ್ಸ್‌ ಫಾರ್ಮರ್‌ ಗಳನ್ನು (ಟಿಸಿ) ಹೆಚ್ಚುವರಿಯಾಗಿ ದಾಸ್ತಾನು ಮಾಡಿಕೊಂಡು, ರೈತರಿಗೆ ಅಗತ್ಯ ಬಿದ್ದಾಗ ಕೂಡಲೇ ನೀಡಲಾಗುತ್ತಿತ್ತು. ಆದರೆ ಈಗ ಒಂದು ಟಿಸಿ ಹಾಕಿಸಿಕೊಳ್ಳಲು ರೈತರು 10 ಸಾವಿರ ಲಂಚ ನೀಡಬೇಕಾದ ನೀಚ ಸ್ಥಿತಿ ಇದೆ. ಇಂತಹ ಕೆಟ್ಟಸ್ಥಿತಿಯಲ್ಲಿ ಜಿಲ್ಲೆಯಲ್ಲಿ ಹಿಂದೆಂದೂ ಬಂದಿರಲಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು. ಹೈಕಮಾಂಡ್‌ ನೋಡಿಕೊಳ್ಳಬೇಕು: ಜಿಲ್ಲಾ ಉಸ್ತುವಾರಿ ಸಚಿವರಿಗೆ ರಾಜ್ಯದ ಇತರೆ ಕಡೆ ನೋಡಬೇಕು ಮತ್ತು ಡೆಲ್ಲಿಯ ಹೈಕಮಾಂಡ್‌ ಅವರನ್ನು ವಿಶೇಷವಾಗಿ ನೋಡಿಕೊಳ್ಳಬೇಕು. ಆದ್ದರಿಂದ ಜಿಲ್ಲಾ ಡಳಿತ ಕೂಡಲೇ ಚೆಸ್ಕಾಂ ನಲ್ಲಿ ಇರುವ ಭ್ರಷ್ಟತೆ ಮತ್ತು ಅದಕ್ಷತೆಗೆ ಕಡಿವಾಣ ಹಾಕುವ ಮೂಲಕ ಈಗಾಗಲೇ ಮಳೆ- ಬೆಳೆಯಿಲ್ಲದೇ ಬರ ದಿಂದ ನರಳುತ್ತಿರುವ ರೈತರನ್ನು ರಕ್ಷಿಸ ಬೇಕೆಂದು ಆಗ್ರಹಿಸಿದರು. ಜೆಡಿಎಸ್‌ ಮುಖಂಡ ಕೆ.ಎಂ. ರಾಜೇ ಗೌಡ, ಜಿಲ್ಲಾ ಸಹಕಾರ ಬ್ಯಾಂಕ್‌ ಅಧ್ಯಕ್ಷ ಹೊನ್ನಾವಳ್ಳಿ ಸತೀಶ್‌ ಇದ್ದರು.