ಹಾಸನ ಜಿಲ್ಲಾಧಿಕಾರಿಯಾಗಿ ರೋಹಿಣಿ ಸಿಂಧೂರಿ ಮುಂದುವರಿಯಲಿದ್ದಾರೆ, ವರ್ಗಾವಣೆ ವಿಚಾರ ಸಂಬಂಧ ಮತ್ತೆ ರಾಜ್ಯ ಸರ್ಕಾರಕ್ಕೆ ಮುಖಭಂಗವಾಗಿದೆ.

ಹಾಸನ: ಹಾಸನ ಜಿಲ್ಲಾಧಿಕಾರಿಯಾಗಿ ರೋಹಿಣಿ ಸಿಂಧೂರಿ ಮುಂದುವರಿಯಲಿದ್ದಾರೆ, ವರ್ಗಾವಣೆ ವಿಚಾರ ಸಂಬಂಧ ಮತ್ತೆ ರಾಜ್ಯ ಸರ್ಕಾರಕ್ಕೆ ಮುಖಭಂಗವಾಗಿದೆ. ವರ್ಗಾವಣೆ ವಿವಾದ ಸಂಬಂಧ ಇಂದು ಸಿಎಟಿಯಲ್ಲಿ ಅಂತಿಮ ವಿಚಾರಣೆ ನಡೆದಿದೆ. ಅವಧಿಗೂ ಮುನ್ನ ವರ್ಗಾವಣೆಯನ್ನು ಪ್ರಶ್ನಿಸಿ ಮಾರ್ಚ್ 8 ರಂದು ರೋಹಿಣಿ ಸಿಂಧೂರಿ ಅವರ ಸಿಎಟಿ ಮೊರೆ ಹೋಗಿದ್ದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸರ್ಕಾರದ ಆದೇಶಕ್ಕೆ ಈ ಹಿನ್ನೆಲೆಯಲ್ಲಿ ಸಿಎಟಿ ತಡೆ ನೀಡಿತ್ತು. ಮೊದಲು ಮಾರ್ಚ್ 13ರಂದು ನಿಗದಿಯಾಗಿದ್ದ ವಿಚಾರಣೆಯನ್ನು ಇಂದಿಗೆ ಮುಂದೂಡಲಾಗಿತ್ತು. ಇಂದು ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿಯಲ್ಲಿ ವಿಚಾರಣೆ ನಡೆದಿದೆ.

ರೋಹಿಣಿ ಅವರ ವರ್ಗಾವಣೆ ಸಂಬಂಧ ಸರ್ಕಾರದ ಮುಖ್ಯ ಕಾರ್ಯದರ್ಶಿ ಆದೇಶಿಸುವವರೆಗೂ ಯಥಾಸ್ಥಿತಿ ಕಾಪಾಡುವಂತೆ ಸೂಚನೆ ನೀಡಲಾಗಿದೆ. ಒಂದು ವಾರದ ಒಳಗೆ ಮುಖ್ಯ ಕಾರ್ಯದರ್ಶಿಗೆ ಮನವಿ ಸಲ್ಲಿಸಬೇಕು. ಮನವಿ ಸಲ್ಲಿಸಿದ 3 ದಿನದ ಒಳಗೆ ಸರ್ಕಾರ ಆದೇಶ ನೀಡಬೇಕು. ಹೊಸ ಆದೇಶವನ್ನು ಪ್ರಶ್ನಿಸುವ ಅಧಿಕಾರ ರೋಹಿಣಿ ಸಿಂಧೂರಿಗೆ ಬಿಟ್ಟಿದ್ದು ಎಂದು ರೋಹಿಣಿ ಸಿಂಧೂರಿ ವರ್ಗಾವಣೆ ಸಂಬಂಧ ಕೇಂದ್ರ ಆಡಳಿತಾತ್ಮಕ ಮಂಡಳಿ ಆದೇಶ ನೀಡಿದೆ.