ತೆವಳುತ್ತಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಲು ಮುಂದಾದ ವ್ಯಕ್ತಿಯನ್ನು ತಡೆದಿದ್ದಲ್ಲದೇ, ದರ್ಪ ತೋರಿ, ಅಮಾನವೀಯತೆ ಮೆರೆದ ಪೊಲೀಸರು.

ಕಡೂರು: ಸಾಧನಾ ಸಮಾವೇಶದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲು ಬಂದ ವಿಕಲಚೇತನ ವ್ಯಕ್ತಿ ಮೇಲೆ ಪೊಲೀಸರು ದರ್ಪ ತೋರಿ, ಅಮಾನವೀಯತೆ ಮೆರೆದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನಲ್ಲಿ ನಡೆದಿದೆ.

ತೆವಳುತ್ತಲೇ ಆಗಮಿಸಿದ್ದ ವಿಕಲಚೇತನ ವ್ಯಕ್ತಿ, ಮುಖ್ಯಮಂತ್ರಿಯನ್ನು ಭೇಟಿಯಾಗಲು ಗಂಟೆಗಟ್ಟಲೆ ಕಾದು ಕುಳಿತಿದ್ದರು. ಆದರೆ, ಸಿಎಂ ಅವರನ್ನು ಸಮೀಪಿಸಲು ತೆರಳಿದಾಗ ಪೊಲೀಸರು ತಡೆದು, ದರ್ಪ ತೋರಿದ್ದಾರೆ.

ಇಲ್ಲಿನ ಎಪಿಎಂಸಿ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ ಪಾಲ್ಗೊಂಡಿದ್ದರು. ಬಿಗಿ ಪೊಲೀಸ್ ಬಂದೋಬಸ್ತು ನಿಯೋಜಿಸಲಾಗಿತ್ತು. ಆಗ ಸಿಎಂ ಅವರನ್ನು ಭೇಟಿಯಾಗಲು ಯತ್ನಿಸಿದ ವ್ಯಕ್ತಿಯನ್ನು ತಡೆದಿದ್ದಲ್ಲದೇ, ದರ್ಪ ತೋರಿದ್ದಾರೆ.