ಪೋಷಕರ ನಿರ್ಧಾರ ಧಿಕ್ಕರಿಸಿ ನಿಶ್ಚಿತಾರ್ಥದ ದಿನವೇ ಪ್ರಿಯತಮನನ್ನು ವರಿಸಿದ ಯುವತಿ

Girl Marry Lover Her Engagement Day
Highlights

ತನ್ನ ನಿಶ್ಚಿತಾರ್ಥದ ದಿನವೇ ತನ್ನ ಪ್ರಿಯಕರನೊಂದಿಗೆ ಯುವತಿ ವಿವಾಹವಾದ ಘಟನೆಯೊಂದು ಮೈಸೂರಿನ ನಂಜನಗೂಡಿನಲ್ಲಿ ನಡೆದಿದೆ. ಕ್ರಿಮಿನಲ್ ಹಿನ್ನೆಲೆಯುಳ್ಳವನೊಂದಿಗೆ ಆಕೆಯ ವಿವಾಹ ಮಾಡಲು ಪೋಷಕರು ನಿರ್ಧರಿಸಿದ್ದರು.

ಮೈಸೂರು : ತನ್ನ ನಿಶ್ಚಿತಾರ್ಥದ ದಿನವೇ ತನ್ನ ಪ್ರಿಯಕರನೊಂದಿಗೆ ಯುವತಿ ವಿವಾಹವಾದ ಘಟನೆಯೊಂದು ಮೈಸೂರಿನ ನಂಜನಗೂಡಿನಲ್ಲಿ ನಡೆದಿದೆ. ಕ್ರಿಮಿನಲ್ ಹಿನ್ನೆಲೆಯುಳ್ಳವನೊಂದಿಗೆ ಆಕೆಯ ವಿವಾಹ ಮಾಡಲು ಪೋಷಕರು ನಿರ್ಧರಿಸಿದ್ದರು. ಇದರಿಂದ  ಪೋಷಕರ ನಿರ್ಧಾರವನ್ನು ತಿರಸ್ಕರಿಸಿದ ಯುವತಿ ನಂಜನಗೂಡಿನ ಪರಶುರಾಮ ದೇವಾಲಯದಲ್ಲಿ ವಿವಾಹವಾಗಿದ್ದಾಳೆ.

ಕಳೆದ ಮೂರು ವರ್ಷಗಳಿಂದ ಯುವತಿ ಕೃಷ್ಣಮೂರ್ತಿ ಎನ್ನುವಾತನನ್ನು ಪ್ರೀತಿಸುತ್ತಿದ್ದಳು.  ಹುಡುಗನ ಕುಟುಂಬದಲ್ಲಿ ಬಡತನ ಇದ್ದ ಕಾರಣ ಯುವತಿಯ ಮನೆಯಲ್ಲಿ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು.

ಬಳಿಕ ಕ್ರಿಮಿನಲ್ ಹಿನ್ನೆಲೆಯುಳ್ಳ ಆನಂದ್ ಎಂಬಾತನೊಂದಿಗೆ ವಿವಾಹ ನಿಶ್ಚಯಿಸಿದ್ದರು.   ಆದರೆ ಮನೆಯವರ ನಿರ್ಧಾರ ಧಿಕ್ಕರಿಸಿ ತನ್ನ ಪ್ರಿಯಕರನನ್ನು ವರಿಸಿದ್ದು, ರಕ್ಷಣೆಗಾಗಿ ಪೊಲೀಸರ ಮೊರೆ ಹೋಗಿದ್ದಾರೆ.

 

loader