ಸಾಲ ಬಾಧೆ ತಾಳಲಾರದೆ ಸಾಜೂ ಜೋಸೆಫ್ ಎಂಬ ರೈತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಆನಂದಪುರದಲ್ಲಿ ನಡೆದಿದೆ.
ಶಿವಮೊಗ್ಗ(ಅ.15): ಸಾಲ ಬಾಧೆ ತಾಳಲಾರದೆ ಸಾಜೂ ಜೋಸೆಫ್ ಎಂಬ ರೈತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಆನಂದಪುರದಲ್ಲಿ ನಡೆದಿದೆ.
ಸಾಗರ ತಾಲೂಕಿನ ಆನಂದಪುರದಲ್ಲಿ ಸಾಜೂ ಜೋಸೆಫ್ ಎಂಬ ರೈತ ಒಂದೂವರೆ ಎಕರೆಯಲ್ಲಿ ಶುಂಠಿ ಹಾಗೂ ಬಾಳೆ ಬೆಳೆದಿದ್ದು ಮಳೆ ಬಾರದ ಹಿನ್ನೆಲೆ ಬೆಳೆ ಒಣಗಿತ್ತು. ಒಂದು ಎಕರೆ ಜಮೀನು ಮಾರಿದರೂ ಸಾಲ ತೀರಿರಲಿಲ್ಲ. ಖಾಸಗಿ ವ್ಯಕ್ತಿಗಳ ಬಳಿ ಮೂರು ಲಕ್ಷ ಕೈಸಾಲ ಬಾಕಿ ಇತ್ತು.
ಹೀಗಾಗಿ ತನ್ನ ಜಮೀನಿನಲ್ಲಿ ವಿಷ ಸೇವಿಸಿದ್ದ ಸಾಜೂ ಜೋಸೆಫ್ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ್ದಾರೆ. ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
