ಕ್ಲುಲ್ಲಕ ಕಾರಣಕ್ಕೆ ಅಣ್ಣತಮ್ಮಂದಿರ ನಡುವಿನ ಜಗಳ ತಾರಕಕ್ಕೇರಿ ಸಹೋದರನಿಗೆ ಚಾಕುವಿನಿಂದ ಇರಿದ ಧಾರುಣ ಘಟನೆ ದಾವಣಗೆರೆ ನಗರದಲ್ಲಿ ನಡೆದಿದೆ.
ದಾವಣಗೆರೆ (ಡಿ.20): ಕ್ಲುಲ್ಲಕ ಕಾರಣಕ್ಕೆ ಅಣ್ಣತಮ್ಮಂದಿರ ನಡುವಿನ ಜಗಳ ತಾರಕಕ್ಕೇರಿ ಸಹೋದರನಿಗೆ ಚಾಕುವಿನಿಂದ ಇರಿದ ಧಾರುಣ ಘಟನೆ ದಾವಣಗೆರೆ ನಗರದಲ್ಲಿ ನಡೆದಿದೆ.
ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ಗಾಯಗೊಂಡವನನ್ನು ಹಕ್ಕಿಪಿಕ್ಕಿ ಜನಾಂಗದ ಗಜ ಎಂದು ಗುರುತಿಸಲಾಗಿದೆ. ಸಂಜೆ ನಾಲ್ಕು ಗಂಟೆಗೆ ಗಜ ಸೇರಿದಂತೆ ನಾಲ್ವರು ಸ್ನೇಹಿತರು ಡಾಬಾವೊಂದಕ್ಕೆ ಊಟಕ್ಕೆ ಹೋಗಿದ್ದ ವೇಳೆ ಮಾತಿಗೆ ಮಾತು ಬೆಳೆದು ಗಜನ ಮೇಲೆ ನಾಲ್ವರು ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ನಂತರ ಹೊಟ್ಟೆ ಮತ್ತು ದೇಹದ ವಿವಿಧ ಭಾಗಗಳಿಗೆ ಚಾಕುವಿಂದ ಚುಚ್ಚಿದ್ದಾರೆ. ತೀವ್ರ ರಕ್ತಸ್ರಾವದಿಂದ ಬಳಲಿದ ಗಜನನ್ನು ದಾವಣಗೆರೆ ಚಿಗಟೇರಿ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ.
ಈ ಬಗ್ಗೆ ವಿದ್ಯಾನಗರ ಪೊಲೀಸರಿಗೆ ದೂರು ನೀಡಲಾಗಿದ್ದು ಆರೋಪಿಗಳನ್ನು ಶೀಘ್ರ ಬಂಧಿಸುವಂತೆ ಯುವಕನ ಪೋಷಕರು ಆಗ್ರಹಿಸಿದ್ದಾರೆ. ಹಲ್ಲೆ ನಡೆಸಿರುವವರೆಲ್ಲಾ ಹಕ್ಕಿಪಿಕ್ಕಿ ಜನಾಂಗದ ಸಹೋದರ ಸಂಬಂಧಿಗಳಾಗಿದ್ದು ಎಲ್ಲರು ಒಂದಿಲ್ಲೊಂದು ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಅವರ ಮೂಲ ವೃತ್ತಿಯೇ ಕಳ್ಳತನವಾಗಿದ್ದು ಅವರಿಗೆ ಸೂಕ್ತ ಶಿಕ್ಷೆಯಾಗಬೇಕೆಂದು ಆಗ್ರಹಿಸಿದ್ದಾರೆ.
