ಯಾದಗಿರಿಯಲ್ಲಿ ಹಾಡ ಹಗಲೇ ಫೈರಿಂಗ್

First Published 13, Jan 2018, 5:25 PM IST
Firing in day light in Yadagiri district
Highlights

ಮಾನಸಿಕ ಅಸ್ವಸ್ಥ ಎನ್ನಲಾಗುತ್ತಿರುವ ವ್ಯಕ್ತಿಯೊಬ್ಬ ಮತ್ತೊಬ್ಬ ವ್ಯಕ್ತಿಯೊಬ್ಬನ ಮೇಲೆ ಫೈರಿಂಗ ನಡೆಸಿದ್ದು, ಪ್ರಕರಣ ದಾಖಲಾಗಿದೆ.

ಯಾದಗಿರಿ: ಗುರಮಠಕಲ್ ಪಟ್ಟಣದ ಗಡಿಮೊಹಲ್ಲಾದಲ್ಲಿ ಹಾಡ ಹಗಲೇ ಫೈರಿಂಗ್ ನಡೆದಿದೆ. ಘಟನೆಯಲ್ಲಿ ಒಬ್ಬನಿಗೆ ಗಾಯವಾಗಿದ್ದು, ಕಲಬುರಗಿಗೆ ಹೆಚ್ಚಿನ ಚಿಕಿತ್ಸೆಗೆ ರವಾನಿಸಲಾಗಿದೆ.


ಡಬಲ್ ಬ್ಯಾರೆಲ್ ಬಂದೂಕಿನಿಂದ ಮುಬಾರಕ್ ಮೇಲೆ ಫೈರಿಂಗ್ ನಡೆದಿದೆ. ಮುಬಾರಕ್ ಮೇಲೆ ಆಸಾದ್ ಎಂಬಾತ ಮೂರು ಗುಂಡು ಹಾರಿಸಿದ್ದು, ಮುಬಾರಕ್ ತೊಡೆ ಭಾಗದಲ್ಲಿ ಗುಂಡು ತಗುಲಿ ತೀವ್ರ ಗಾಯವಾಗಿದೆ. 


ಬೆಳೆ ರಕ್ಷಿಸಿಕೊಳ್ಳಲು ಅಸಾದ್ ತಂದೆ ಗನ್ ಪರವಾನಗಿ ಪಡೆದಿದ್ದರು. ತಂದೆ ಗನ್ ತೆಗೆದುಕೊಂಡು ಮಗ ಆಸದ್, ಮುಬಾರಕ್ ಮೇಲೆ ಫೈರಿಂಗ್ ನಡೆಸಿದ್ದಾನೆ.  ಮಾನಸಿಕ ಕಾಯಿಲೆಯಿಂದ ಬಳುತ್ತಿರುವ ಆಸದ್ ಫೈರಿಂಗ್ ನಡೆಸಿದ್ದಾನೆ ಎನ್ನಲಾಗುತ್ತಿದ್ದರೂ, ಹಳೆ ದ್ವೇಷವಿರುವ ಶಂಕೆ ಇದೆ. 


ಸ್ಥಳಕ್ಕೆ ಗುರುಮಠಕಲ್ ಪೊಲೀಸರು ಭೇಟಿ ನೀಡಿದ್ದು, ಆಸದ್ ಹಾಗೂ ಆತನ ತಂದೆ ಅಬ್ದುಲ್ ಅವರನ್ನು ಬಂಧಿಸಿದ್ದಾರೆ. ಗುರುಮಠಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಪದೇ ಪದೇ ಜನರ ಜೊತೆ ಜಗಳವಾಡುತ್ತಿದ್ದ ಆಸದ್‌ಗೆ ಇಂಥ ಕೃತ್ಯ ನಿಲ್ಲಿಸುವಂತೆ ಪೊಲೀಸರು ಎಚ್ಚರಿಸಿದ್ದರು. 

loader