ಮಗನ ಶವಯಾತ್ರೆ ವೇಳೆ ತಂದೆಗೆ ಹೃದಯಾಘಾತ : ಸಾವಿನಲ್ಲೂ ಒಂದಾದ ತಂದೆ-ಮಗ

First Published 12, Feb 2018, 11:29 AM IST
Father Died His Son Funeral
Highlights

ಮೈಸೂರಿನಲ್ಲಿ ತಂದೆ ಮಗ ಸಾವಿನಲ್ಲೂ ಒಂದಾಗಿರುವ ಮನಕಲುಕುವ ಘಟನೆಯೊಂದು ನಡೆದಿದೆ.

ಮೈಸೂರು : ಮೈಸೂರಿನಲ್ಲಿ ತಂದೆ ಮಗ ಸಾವಿನಲ್ಲೂ ಒಂದಾಗಿರುವ ಮನಕಲುಕುವ ಘಟನೆಯೊಂದು ನಡೆದಿದೆ. ಕ್ಯಾನ್ಸರ್ ರೋಗಕ್ಕೆ ತುತ್ತಾಗಿ ಮಗ ಸಾವನ್ನಪ್ಪಿದ್ದು, ಮಗನ ಶವಯಾತ್ರೆ ವೇಳೆ ತಂದೆಯೂ ಕೂಡ ಹೃದಯಾಘಾತದಿಂದ ಮೃತರಾಗಿದ್ದಾರೆ.

ಮಗ ಭೈರೇಗೌಡ (33) ಅವರ ಶವ ಪೂಜೆ ನೆರವೇರಿಸಿದ ತಂದೆ ಪುಟ್ಟೇಗೌಡ (65)  ಬಳಿಕ ಶವವನ್ನು ಸ್ಮಶಾನಕ್ಕೆ ಕೊಂಡೊಯ್ಯುವ ವೇಳೆ ದಾರಿ ಮಧ್ಯೆ ಹೃದಯಾಘಾತಕ್ಕೆ ಒಳಗಾಗಿದ್ದಾರೆ.

ಈ ವೇಳೆ ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಆಸ್ಪತ್ರೆಗೆ ತೆರಳುವ ಮಾರ್ಗಮಧ್ಯೆಯೇ ಅವರು ಮೃತ ಪಟ್ಟಿದ್ದಾರೆ. ಬಳಿಕ ತಂದೆ ಮಗನ ಶವಕ್ಕೆ ಒಂದೇ ಚಿತೆಯಲ್ಲಿ ಅಗ್ನಿಸ್ಪರ್ಷ ನೆರವೇರಿಸಲಾಗಿದೆ.

loader