ಸಾಲದ ಬಾಧೆಯಿಂದ ರಾಜ್ಯದಲ್ಲಿ ರೈತರು ಸರಣಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಈ ದಿನಗಳಲ್ಲಿ ಕಡು ಬಡತನದಲ್ಲಿರುವ ಇಲ್ಲೊಬ್ಬ  ರೈತ ಶೂನ್ಯ ಬಂಡವಾಳದಲ್ಲಿ ಪ್ರತಿ ವರ್ಷ ಲಕ್ಷ ಲಕ್ಷ ಸಂಪಾದಿಸುತ್ತಾರೆ. ವರ್ಷ ಪೂರ್ತಿ ಒಂದಲ್ಲಾ  ಒಂದು ಬೆಳೆಯನ್ನು  ತಗೆಯುತ್ತಿರುತ್ತಾರೆ. ಕೃಷಿಯಿಂದ ಲಾಭ ಇಲ್ಲಾ ಎನ್ನುವವರಿಗೆ ಈ ರೈತನೇ ಮಾದರಿ.

ಬೀದರ್(ಜೂ.13): ಸಾಲದ ಬಾಧೆಯಿಂದ ರಾಜ್ಯದಲ್ಲಿ ರೈತರು ಸರಣಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಈ ದಿನಗಳಲ್ಲಿ ಕಡು ಬಡತನದಲ್ಲಿರುವ ಇಲ್ಲೊಬ್ಬ ರೈತ ಶೂನ್ಯ ಬಂಡವಾಳದಲ್ಲಿ ಪ್ರತಿ ವರ್ಷ ಲಕ್ಷ ಲಕ್ಷ ಸಂಪಾದಿಸುತ್ತಾರೆ. ವರ್ಷ ಪೂರ್ತಿ ಒಂದಲ್ಲಾ ಒಂದು ಬೆಳೆಯನ್ನು ತಗೆಯುತ್ತಿರುತ್ತಾರೆ. ಕೃಷಿಯಿಂದ ಲಾಭ ಇಲ್ಲಾ ಎನ್ನುವವರಿಗೆ ಈ ರೈತನೇ ಮಾದರಿ.

ಬೀದರ್ ತಾಲೂಕಿನ ಚಿಟ್ಟ ಗ್ರಾಮದ ಮಹ್ಮದ್ ಜಾಫರ್ ಎಂಬ ರೈತ ಕೇವಲ ಎರಡೇ ಎರಡು ಎಕರೆಯ ಭೂಮಿಯಲ್ಲಿ ಲಕ್ಷ ಲಕ್ಷ ಸಂಪಾದನೆ ಮಾಡುತ್ತಿದ್ದಾರೆ. ರೈತ ಮಹ್ಮದ್ ಜಾಫರ್ ತನ್ನ ಎರಡು ಎಕರೆ ಭೂಮಿಯಲ್ಲಿ ಮಿಶ್ರ ಬೇಸಾಯ ಮಾಡಿದ್ದು. ಪಪ್ಪಾಯ, ಮಾವು, ಸೀತಾಫಲ, ಹತ್ತು ಹಲವು ತರಕಾರಿಗಳನ್ನ ಮಿಶ್ರ ತಳಿಗಳನ್ನು ಶೂನ್ಯ ಸಂಪಾದನೆಯಿಂದ ಬೆಳೆದು ಲಕ್ಷ ಲಕ್ಷ ಸಂಪಾದನೆ ಮಾಡುತ್ತಿದ್ದಾರೆ. ಒಂದು ಬಾರಿ ಹತ್ತು ಬೆಳೆಗಳನ್ನು ಹಾಕಿ ವರ್ಷವಿಡಿ ಬಂದಲ್ಲಾ ಒಂದು ಬೆಳೆಗಳನ್ನು ಬರುವಂತ್ತೆ ಪ್ಲಾನ್ ಮಾಡಿಕೊಂಡಿದ್ದಾರೆ.

ಇನ್ನು ಇವರ ಸಾಧನೆಯನ್ನು ಕಂಡು ಕೃಷಿ ಇಲಾಖೆ ಮತ್ತು ಕೆವಿಕೆಯಿಂದ ಹಲವು ಪ್ರಶಸ್ತಿಗಳು ಬಂದಿವೆ. ಒಟ್ಟಿನಲ್ಲಿ ಕಷ್ಟ ಪಟ್ಟು ದುಡಿದು ಭೂಮಿತಾಯಿಯನ್ನು ನಂಬಿದರೆ ಲಾಭ ಖಂಡಿತ ಸಿಗುತ್ತದೆ ಎನ್ನುವುದನ್ನು ಜಾಫರ್ ಸಾಧಿಸಿ ತೋರಿಸಿದ್ದಾರೆ.

ಒಟ್ಟಿನಲ್ಲಿ, ಅನೇಕ ಸಮಸ್ಯಗಳಿಂದ ಆತ್ಮಹತ್ಯೆ ಮಾಡಿಕೊಳ್ತಿರುವ ರೈತರಿಗೆ ಜಾಫರ್ ಒಂದು ಒಳ್ಳೆಯ ಮಾದರಿ. ಜಾಫರ್ ಅವರ ಕೃಷಿ ಪದ್ಧತಿ ನಿಜಕ್ಕೂ ಇಂದಿನ ದಿನಮಾನಗಳಲ್ಲಿ ಎಲ್ಲಾ ರೈತರು ಅನುಸರಿಸುವುದ ತುಂಬಾ ಅವಶ್ಯವಾಗಿದೆ.