Asianet Suvarna News Asianet Suvarna News

[ಸುಳ್ಳು ಸುದ್ದಿ] ಇವಿಎಂ ಬದಲು ಫೇಸ್’ಬುಕ್ – ಟ್ವಿಟರ್ ಮೂಲಕವೇ ಚುನಾವಣೆ

ಇವಿಎಂ ಬದಲು ಫೇಸ್‌ಬುಕ್ ಮತ್ತು ಟ್ವೀಟರ್‌ನಲ್ಲಿ ಚುನಾವಣೆ ನಡೆಸುವ ಬಗ್ಗೆ ಚುನಾವಣಾ ಆಯೋಗ ಗಂಭೀರ ಚಿಂತನೆ ನಡೆಸಿದೆ.

Faking News Election On FaceBook And Twitter

ಬೆಂಗಳೂರು : ಇವಿಎಂ ಬದಲು ಫೇಸ್‌ಬುಕ್ ಮತ್ತು ಟ್ವೀಟರ್‌ನಲ್ಲಿ ಚುನಾವಣೆ ನಡೆಸುವ ಬಗ್ಗೆ ಚುನಾವಣಾ ಆಯೋಗ ಗಂಭೀರ ಚಿಂತನೆ ನಡೆಸಿದೆ. ರಾಜಕೀಯ ಪಕ್ಷಗಳು ಚುನಾವಣಾ ಪ್ರಚಾರಕ್ಕೆ ಸಾಮಾಜಿಕ ಜಾಲತಾಣಗಳ ಮೊರೆ ಹೋಗಿದ್ದು, ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಮೇ ತಿಂಗಳಿನಲ್ಲಿ ಬಿಸಿಲು ಜಾಸ್ತಿ ಇರುವುದರಿಂದ ಜನರು ಮತಗಟ್ಟೆಗೆ ಬಂದು ಮತಹಾಕಲು ಹಿಂದೇಟು ಹಾಕುತ್ತಾರೆ. ಅದೇ ಫೇಸ್‌ಬುಕ್ ಮತ್ತು ಟ್ವೀಟರ್‌ನಲ್ಲಿ ಮತದಾನ ಮಾಡಲು ಅವಕಾಶ ನೀಡಿದರೆ ಎಲ್ಲರೂ ಮತ ಹಾಕುತ್ತಾರೆ.

ಕೆಲವೇ ಗಂಟೆ ಗಳಲ್ಲಿ ಮತದಾನ ಮುಕ್ತಾಯವಾಗಲಿದೆ. ಫೇಸ್‌ಬುಕ್ ಮತ್ತು ಟ್ವೀಟರ್ ಖಾತೆ ಇಲ್ಲದವರು ಮತಟ್ಟೆಗೆ ಬಂದು ಮತ ಹಾಕುವುದಕ್ಕೂ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಆದರೆ, ಶೇ.90ರಷ್ಟು ಮತದಾರರು ಫೇಸ್‌ಬುಕ್, ಟ್ವೀಟರ್ ಖಾತೆ ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.

Follow Us:
Download App:
  • android
  • ios