ಮಾರುಕಟ್ಟೆಗೆ ನಕಲಿ ಅಕ್ಕಿ ಬಂದಿದ್ದಾಯ್ತು, ಕೃತಕ ಸಕ್ಕರೆಯೂ ಬಂದಾಯ್ತು‌ ಇದೀಗ ಕಲಬುರಗಿಯ ಮಾರುಕಟ್ಟೆಗೆ  ನಕಲಿ ಮೊಟ್ಟೆಗಳು ಲಗ್ಗೆಇಟ್ಟಿವೆ. ಈ ಮೊಟ್ಟೆಯನ್ನು ನೋಡಿದರೆ ಅಸಲಿ ಎಂಬಂತೆತೆ ಕಾಣಿಸುತ್ತದೆ. ಪ್ಲಾಸ್ಟಿಕ್ ಮೊಟ್ಟೆ ಕುರಿತಾದ ಒಂದು ವರದಿ ಹೀಗಿದೆ.

ಕಲಬುರಗಿ(ಮೇ.10): ಮಾರುಕಟ್ಟೆಗೆ ನಕಲಿ ಅಕ್ಕಿ ಬಂದಿದ್ದಾಯ್ತು, ಕೃತಕ ಸಕ್ಕರೆಯೂ ಬಂದಾಯ್ತು‌ ಇದೀಗ ಕಲಬುರಗಿಯ ಮಾರುಕಟ್ಟೆಗೆ ನಕಲಿ ಮೊಟ್ಟೆಗಳು ಲಗ್ಗೆಇಟ್ಟಿವೆ. ಈ ಮೊಟ್ಟೆಯನ್ನು ನೋಡಿದರೆ ಅಸಲಿ ಎಂಬಂತೆತೆ ಕಾಣಿಸುತ್ತದೆ. ಪ್ಲಾಸ್ಟಿಕ್ ಮೊಟ್ಟೆ ಕುರಿತಾದ ಒಂದು ವರದಿ ಹೀಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಲಬುರಗಿಯ ಮಾರುಕಟ್ಟೆಯಲ್ಲಿ ನಕಲಿ ಮೊಟ್ಟೆಗಳ ಅಬ್ಬರ ಜೋರಾಗಿದೆ. ಅಸಲಿ ಕೋಳಿ ಮೊಟ್ಟೆ ಜೊತೆಗೆ ನಕಲಿ ಮೊಟ್ಟೆಗಳ ಮಾರಾಟ ನಡೆಯುತ್ತಿದ್ದು, ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ. ಹಾಗಾದರೆ ಅಸಲಿ ಮೊಟ್ಟೆ ಯಾವುದು? ನಕಲಿ ಮೊಟ್ಟೆ ಯಾವುದು ಅನ್ನೋದನ್ನು ಪತ್ತೆ ಹಚ್ಚುವಿದು ಹೇಗೆ? ಅಂತಾ ನಮ್ಮ ರಿಪೋರ್ಟರ್​ ತೋರಿಸಿದ್ದಾರೆ ನೋಡಿ..

ಅಂದಹಾಗೇ ಮೊಟ್ಟೆಗಳ ಅಸಲಿಯತ್ತನ್ನು ಬಯಲು ಮಾಡಿದ್ದು ಕಲಬುರಗಿಯ ಬ್ರೆಕ್ ಥ್ರೂ ಸೈನ್ಸ್ ಸೊಸೈಟಿ ಹಾಗೂ ಕಲಬುರಗಿ ವಿವಿಯ ಜೈವಿಕ ತಂತ್ರಜ್ಞಾನ ವಿಭಾಗದ ವಿದ್ಯಾರ್ಥಿಗಳು. ಒಟ್ಟಿನಲ್ಲಿ ಇದೆಲ್ಲಾ ನೋಡುತ್ತಿದ್ದಾರೆ ಏನು ತಿನ್ನಬೇಕು ಏನು ತಿನ್ನಬಾರದು ಅನ್ನೋದೇ ಪ್ರಶ್ನೆಯಾಗಿದೆ. ನೀವು ಅಷ್ಟೇ ಮೊಟ್ಟೆಗಳನ್ನು ಕೊಳ್ಳುವ ಮುನ್ನ ಹುಷಾರಾಗಿರಿ.. ಸರ್ಕಾರ ಕೂಡಾ ಇಂಥ ದಂಧೆಕೋರರನ್ನು ಮಟ್ಟಹಾಕಲು ಕ್ರಮ ಕೈಗೊಳ್ಳಬೇಕಿದೆ.