ನಕಲಿ ಖಾತೆ ತೆರೆಯಲು ಹೇಳಿದ ರಮ್ಯಾ ವಿರುದ್ಧ ಬಿಜೆಪಿ ದೂರು

Fake account class of Ramya bjp to file complaint
Highlights

ಸಾಮಾಜಿಕ ಜಾಲತಾಣಗಳಲ್ಲಿ ವಿರೋಧಿಗಳನ್ನು ಬಗ್ಗು ಬಡಿಯಲು ನಕಲಿ ಖಾತೆಗಳನ್ನು ತೆರೆಯುವುದು ಹೇಗೆ ಎಂದು ಪಾಠ ಮಾಡಿರುವ ಕಾಂಗ್ರೆಸ್ ಸೋಷಿಯಲ್ ಮೀಡಿಯಾ ಮುಖ್ಯಸ್ಥೆ ರಮ್ಯಾ ವೀಡಿಯೋ ವೈರಲ್ ಆಗಿದ್ದು, ಇದರ ವಿರುದ್ಧ ಬಿಜೆಪಿ ದೂರು ದಾಖಲಿಸುತ್ತಿದೆ.

ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ವಿರೋಧಿಗಳನ್ನು ಬಗ್ಗು ಬಡಿಯಲು ನಕಲಿ ಖಾತೆಗಳನ್ನು ತೆರೆಯುವುದು ಹೇಗೆ ಎಂದು ಪಾಠ ಮಾಡಿರುವ ಕಾಂಗ್ರೆಸ್ ಸೋಷಿಯಲ್ ಮೀಡಿಯಾ ಮುಖ್ಯಸ್ಥೆ ರಮ್ಯಾ ವೀಡಿಯೋ ವೈರಲ್ ಆಗಿದ್ದು, ಇದರ ವಿರುದ್ಧ ಬಿಜೆಪಿ ದೂರು ದಾಖಲಿಸುತ್ತಿದೆ.

ಇನ್‌ಫ್ಯಾಂಟ್ರಿ ರಸ್ತೆಯಲ್ಲಿರುವ ನಗರ ಪೊಲೀಸ್ ಕಮಿಷನರ್ ಅವರಿಗೆ ಬಿಜೆಪಿ ದೂರು ನೀಡಲಿದೆ. ಶಾಸಕರೂ, ರಾಜ್ಯ ಬಿಜೆಪಿ ವಕ್ತಾರರೂ ಆದ ಶ್ರೀ ಎಸ್.ಸುರೇಶ್ ಕುಮಾರ್, ವಕ್ತಾರರಾದ ಡಾ.ವಾಮನ್ ಆಚಾರ್ಯ, ಸಹ ವಕ್ತಾರರಾದ ಶ್ರೀಮತಿ ಮಾಳವಿಕಾ, ಕು.ಮಂಜುಳಾ, ಎ.ಎಚ್. ಆನಂದ್, ರಾಜ್ಯ ಬಿಜೆಪಿ ಸೋಶಿಯಲ್ ಮೀಡಿಯಾ ವಿಭಾಗದ ಸಂಚಾಲಕ ಶ್ರೀ ಬಾಲಾಜಿ  ಅವರು ನಿಯೋಗದಲ್ಲಿರುತ್ತಾರೆ, ಬಿಜೆಪಿ ಪತ್ರಿಕಾ ಪ್ರಕಟಣೆ ತಿಳಿಸಿದೆ.

ಪದಾಧಿಕಾರಿಯೊಬ್ಬರು ಫೇಕ್‌ ಅಕೌಂಟ್‌ ಮಾಡುವುದು ತಪ್ಪೆ? ಎಂದು ಪ್ರಶ್ನಿಸಿದಾಗ ನಕಲಿ ಅಕೌಂಟ್‌ ಹೇಗೆ ಮಾಡಬಹುದು ಎಂಬುದನ್ನು ವಿವರಿಸುವ ರಮ್ಯಾ ಪಾಠದ ವೀಡಿಯೋ ವೈರಲ್ ಆಗಿದೆ. ಈ ಫೇಕ್‌ ಅಕೌಂಟ್‌ ಕುರಿತು ಮಾಡಿರುವ ಪಾಠವನ್ನು ಪಕ್ಷದ ಪದಾಧಿಕಾರಿಯೊಬ್ಬರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದು, ನಂತರ ಲೀಕ್ ಮಾಡಿದ್ದಾರೆ.

'ನೀವೆಲ್ಲರೂ ಈಗ ಮೂರು ಅಕೌಂಟ್‌ ಕ್ರಿಯೇಟ್‌ ಮಾಡಬೇಕು. ಮೊದಲು ನಿಮ್ಮ ಹೆಸರಿನಲ್ಲಿ, ಮತ್ತೊಂದನ್ನು ಬೇರೆಯವರ ಹೆಸರಿನಲ್ಲಿ ಹಾಗೂ ಇನ್ನೊಂದನ್ನು ಇನ್ನೊಬ್ಬರ ಹೆಸರಿನಲ್ಲಿ... ಹೀಗೆ ಹೆಚ್ಚು ಅಕೌಂಟ್‌ ಕ್ರಿಯೇಟ್‌ ಮಾಡಿ. ಅದರಲ್ಲಿ ತಪ್ಪೇನೂ ಇಲ್ಲ,' ಎಂದು ವೀಡಿಯೋದಲ್ಲಿ ರಮ್ಯಾ ಬೋಧಿಸಿದ್ದಾರೆ.
 

loader