ಮಹದಾಯಿಯ ಹನಿ ನೀರನ್ನೂ ಕರ್ನಾಟಕಕ್ಕೆ ಕೊಡೋಲ್ಲ: ಗೋವಾ ನೀರಾವರಿ ಸಚಿವ

Even a single drop of water wont be given to Karnataka says Goa Water Resource Minister
Highlights

ಕುಡಿಯಲು ನೀರು ಕೊಡುವುದಾಗಿ ಹೇಳಿ, ಯಡಿಯೂರಪ್ಪ ಅವರಿಗೆ ಗೋವಾ ಮುಖ್ಯಮಂತ್ರಿ ಪತ್ರ ಬರೆದಿದ್ದಾರೆಂದು ಹೇಳಲಾಗಿತ್ತು. ಈ ಸಂಬಂಧವಾಗಿ ಈ ಪ್ರದೇಶದ ರೈತರು ಪ್ರತಿಭಟಿಸಿ, ಸಮಸ್ಯೆಯನ್ನು ಬಗೆಹರಿಸಲು ಆಗ್ರಹಿಸಿದ್ದರು. ಆದರೀಗ ಗೋವಾ ನೀರಾವರಿ ಸಚಿವ ಹನಿ ನೀರನ್ನೂ ನೀಡುವುದಿಲ್ಲವೆಂದು ಕರ್ನಾಟಕಕ್ಕೆ ಖಡಕ್ಕಾಗಿ ಹೇಳಿದ್ದಾರೆ.

ಬೆಳಗಾವಿ: 'ನಮ್ಮ ತಾಯಿ ನ್ಯಾಯಾಲಯದಲ್ಲಿ ವಿವಾದ ಇತ್ಯರ್ಥವಾಗುವರೆಗೂ ಮಹದಾಯಿಯ  ಹನಿ ನೀರನ್ನೂ ಕರ್ನಾಟಕಕ್ಕೆ ಕೊಡವ ಪ್ರಶ್ನೇಯೆ ಇಲ್ಲ,' ಎಂದು ಗೋವಾ ನೀರಾವರಿ ಸಚಿವ ವಿನೋದ್ ಪಾಳೇಕರ್ ಹೇಳಿದ್ದಾರೆ.

ಇಂದು ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕಣಕುಂಬಿ ಬಳಿಯಿರುವ ಕಳಸಾ ನಾಲಾ ಕಾಮಗಾರಿ ಪರಿಶೀಲಿಸಿ, ರಾಜ್ಯ ಸರ್ಕಾರ ವಿರುದ್ಧ ಅಸಮಾಧಾನ ವ್ಯೆಕ್ತಪಡಿಸಿದ ಪಾಳೇಕರ್  ಸುವರ್ಣ ನ್ಯೂಸ್ ಜೊತೆ ಮಾತನಾಡಿದರು.

'ಕರ್ನಾಟಕ ಸರ್ಕಾರ ಸುಪ್ರೀಂಕೋರ್ಟ್ ಆದೇಶ ಉಲ್ಲಂಘಿಸಿದೆ. ಮಹದಾಯಿ ವಿಚಾರದಲ್ಲಿ ಕರ್ನಾಟಕ ಸರ್ಕಾರ ಡರ್ಟಿ ಪೋಲಿಟಿಕ್ಸ್ ಮಾಡುತ್ತಿದೆ. ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕರ್ ಅವರು ರಾಜ್ಯ ಬಿಜೆಪಿ ಅದ್ಯಕ್ಷ  ಯಡಿಯೂರಪ್ಪ ಅವರಿಗೆ ಬರೆದ ಪತ್ರ ನ್ಯಾಯಾಲಯದ ಆದೇಶವಲ್ಲ.  ಮಹದಾಯಿ ನಮ್ಮ ತಾಯಿ,  ಕರ್ನಾಟಕದಲ್ಲಿ ರೈತರು ಪ್ರತಿಭಟನೆ ಮಾಡಿದರೆ ನಮಗೇನು? ಮಹದಾಯಿ ವಿವಾದ ಪ್ರಕರಣ ನ್ಯಾಯಾಧೀಕರಣದಲ್ಲಿ ಇತ್ಯರ್ಥವಾಗುವವರೆಗೂ ನೀರು ಕೊಡುವ  ಪ್ರಶ್ನೆಯೇ ಇಲ್ಲ,' ಎಂದರು.

'ಕರ್ನಾಟಕ ಸರ್ಕಾರ ಕಾಮಗಾರಿ ನಡೆಸಲ್ಲಾ‌ ಎಂದು ನ್ಯಾಯಾಲಯದಲ್ಲಿ ಹೇಳಿ ಕಾಮಗಾರಿ ನಡೆಸುತ್ತಿದೆ. ಇದನ್ನು ನಾನು  ಖಂಡಿಸುತ್ತೆನೆ,' ಎಂದರು.
 

ಇವರ ಜೊತೆ ಗೋವಾ ರಾಜ್ಯದ ನೀರಾವರಿ ಇಲಾಖೆಯ  ಮುಖ್ಯ ಇಂಜಿನಿಯರ್ ಸಂದೀಪ್ ನಾಡಕರ್ಣಿ ಸೇರೆದಂತೆ ಹಲವು ಅಧಿಕಾರಿಗಳು ಭಾಗಿಯಾಗಿದ್ದರು. 

loader