ನಾಗಮಂಡಲ ಪೂಜೆಗೂ ತಟ್ಟಿದ ನೀತಿ ಸಂಹಿತೆ

First Published 30, Mar 2018, 9:41 AM IST
Election Code Of Cunduct news
Highlights

ನಾಗಮಂಡಲ ಪೂಜಾ ಕಾರ್ಯಕ್ರಮಕ್ಕೆ ಸಂಬಂಧಿಸಿ ಅಳವಡಿಸಿದ್ದ ಕೇಸರಿ ಬಣ್ಣದ ಬಂಟಿಂಗ್ಸ್, ಧ್ವಜ, ಬ್ಯಾನರ್ ಗಳನ್ನು ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಅಡಿ ತೆರವುಗೊಳಿಸಿದ ಘಟನೆ ಉಡುಪಿ ಜಿಲ್ಲೆ ಸಾಸ್ತಾನದಲ್ಲಿ ನಡೆದಿದೆ.

ಬ್ರಹ್ಮಾವರ: ನಾಗಮಂಡಲ ಪೂಜಾ ಕಾರ್ಯಕ್ರಮಕ್ಕೆ ಸಂಬಂಧಿಸಿ ಅಳವಡಿಸಿದ್ದ ಕೇಸರಿ ಬಣ್ಣದ ಬಂಟಿಂಗ್ಸ್, ಧ್ವಜ, ಬ್ಯಾನರ್ ಗಳನ್ನು ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಅಡಿ ತೆರವುಗೊಳಿಸಿದ ಘಟನೆ ಉಡುಪಿ ಜಿಲ್ಲೆ ಸಾಸ್ತಾನದಲ್ಲಿ ನಡೆದಿದೆ.

ಇಲ್ಲಿ ನಾಗಮಂಡಲ ಪೂಜೆ ನಡೆಸುವ ಮನೆಯವರು ಸಾಸ್ತಾನ ಸುತ್ತಮುತ್ತ ಮತ್ತು ಚೇಂಪಿ ಗ್ರಾಮದಲ್ಲಿ ಕೇಸರಿ ಬಣ್ಣದ ಬಂಟಿಂಗ್ಸ್, ಧ್ವಜ ಮತ್ತು ಬ್ಯಾನರುಗಳನ್ನು ಕಟ್ಟಿದ್ದರು. ಇದರಲ್ಲಿ ಯಾವುದೇ ಪಕ್ಷ, ಭಾವಚಿತ್ರ ಅಥವಾ ಹೆಸರು ಇರಲಿಲ್ಲ. ಆದರೂ ಆಯೋಗಕ್ಕೆ ಕೇಸರಿ ಧ್ವಜಗಳನ್ನು ಬಳಸಿರುವ ಬಗ್ಗೆ ದೂರು ಬಂದಿತ್ತು.

ಅದರಂತೆ ಚುನಾವಣಾ ಆಯೋಗದ ಫ್ಲೈಯಿಂಗ್ ಸ್ಕ್ವಾಡ್‌ನ ಅಧಿಕಾರಿಗಳ ತಂಡ ರಾತ್ರಿ ಸುಮಾರು 9.30ಕ್ಕೆ ಸ್ಥಳಕ್ಕೆ ಆಗಮಿಸಿ, ಕೇಸರಿ ಬಂಟಿಂಗ್ ಮತ್ತು ಧ್ವಜಗಳನ್ನು ತೆರವುಗೊಳಿಸುವಂತೆ ಸೂಚಿಸಿ ದರು. ಕೇಸರಿ ಧ್ವಜ ಹೇಗೆ ಒಂದು ಪಕ್ಷವನ್ನು ಪ್ರತಿನಿಧಿಸುತ್ತದೆ ಎಂಬುದನ್ನು ಮನವರಿಕೆ ಮಾಡಿಕೊಟ್ಟು ಧ್ವಜ, ಬ್ಯಾನರ್, ಬಂಟಿಂಗ್ಸ್ ತೆಗೆಸುವಷ್ಟರಲ್ಲಿ ನಾಗಮಂಡಲ ಬಹುತೇಕ ಮುಗಿದಿತ್ತು.

loader