ಶೋಭಾ ಮೇಲೆ ಮುನಿಸಿಕೊಂಡರು ಸ್ಲಂ ನಿವಾಸಿಗಳು

First Published 11, Feb 2018, 12:49 PM IST
Dont Call Slum Says Mysuru Slum Peoples To Shobha
Highlights

ರಾಜ್ಯ ಬಿಜೆಪಿ ಮುಖಂಡರು ವಿವಿಧೆಡೆ ಸ್ಲಂನಲ್ಲಿ ವಾಸ್ತವ್ಯ ಹೂಡಿದ್ದಾರೆ. ಅಂತೆಯೇ ಮೈಸೂರಿನಲ್ಲಿ ಬಿಜೆಪಿ ನಾಯಕಿ ಶೋಭಾ ಕರಂದ್ಲಾಜೆ ವಾಸ್ತವ್ಯ ಹೂಡಿದ್ದು, ಇಲ್ಲಿ ಅವರು ಮಾತನಾಡುವ ವೇಳೆ ಸ್ಲಂ ಎಂದು ಹೇಳಿದ್ದಕ್ಕೆ ಅಲ್ಲಿನ ನಿವಾಸಿಗಳು ಶೋಭಾ ಮೇಲೆ ಮುನಿಸಿಕೊಂಡಿದ್ದಾರೆ.

ಮೈಸೂರು : ರಾಜ್ಯ ಬಿಜೆಪಿ ಮುಖಂಡರು ವಿವಿಧೆಡೆ ಸ್ಲಂನಲ್ಲಿ ವಾಸ್ತವ್ಯ ಹೂಡಿದ್ದಾರೆ. ಅಂತೆಯೇ ಮೈಸೂರಿನಲ್ಲಿ ಬಿಜೆಪಿ ನಾಯಕಿ ಶೋಭಾ ಕರಂದ್ಲಾಜೆ ವಾಸ್ತವ್ಯ ಹೂಡಿದ್ದು, ಇಲ್ಲಿ ಅವರು ಮಾತನಾಡುವ ವೇಳೆ ಸ್ಲಂ ಎಂದು ಹೇಳಿದ್ದಕ್ಕೆ ಅಲ್ಲಿನ ನಿವಾಸಿಗಳು ಶೋಭಾ ಮೇಲೆ ಮುನಿಸಿಕೊಂಡಿದ್ದಾರೆ.

ಇಲ್ಲಿನ ಕ್ಯಾತಮಾರನಹಳ್ಳಿ  ನಿವಾಸಿಗಳು ಶೋಭಾ ಕರಂದ್ಲಾಜೆ ಮುಂದೆಯೇ ಆಕ್ರೋಶ ವ್ಯಕ್ತ ಪಡಿಸಿದ್ದಾರೆ . ಅಲ್ಲದೇ ದಯವಿಟ್ಟು ನಮ್ಮ ಬೀದಿಯನ್ನು ಸ್ಲಂ ಎಂದು ಕರೆಯಬೇಡಿ. ದಲಿತರ ಕೇರಿ ಎಂದು ಬೇಕಾದರೆ ಕರೆಯಿರಿ ಎಂದು ಶೋಭಾಗೆ ಮನವಿ ಮಾಡಿದ್ದಾರೆ.

ಅಲ್ಲದೇ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆದರ್ಶನಗಳನ್ನು ನಾವು  ಪಾಲಿಸುತ್ತಿದ್ದೇವೆ. ನಾವು ವಾಸವಾಗಿರುವ ಸ್ಥಳಕ್ಕೆ ಸ್ಲಂ ಎನ್ನದಿರಿ ಎಂದು ಶೋಭಾ ಕರಂದ್ಲಾಜೆ ಮುಂದೆ ಯುವಕನೋರ್ವ ಮನವಿ ಮಾಡಿದ್ದಾನೆ.

loader