ಚಿಕ್ಕಬಳ್ಳಾಪುರ ಜಿಲ್ಲೆ ಕಾಂಗ್ರೆಸ್ ನ ಭದ್ರಕೋಟೆ ಎಂದು ಹೆಸರು ಪಡೆದಿರುವ ಜಿಲ್ಲೆ. ಇದೀಗ ಜಿಲ್ಲೆಯ ಕಾಂಗ್ರಸ್ ನಲ್ಲಿ ಭಿನ್ನಮತ ಶುರುವಾಗಿದೆ, ಕಾಂಗ್ರೆಸ್ ಆಡಳಿತವಿರುವ ಜಿಲ್ಲಾ ಪಂಚಾಯತ್'ನಲ್ಲೆ ಅಧ್ಯಕ್ಷರು ಕರೆದಿರುವ ಜಿಲ್ಲಾ ಪಂಚಾಯತ್ ಸಾಮಾನ್ಯಸಭೆಗೆ ಸದಸ್ಯರು ಗೈರಾಗಿದ್ದಾರೆ.
ಚಿಕ್ಕಬಳ್ಳಾಪುರ(ಎ.30): ಚಿಕ್ಕಬಳ್ಳಾಪುರ ಜಿಲ್ಲೆ ಕಾಂಗ್ರೆಸ್ ನ ಭದ್ರಕೋಟೆ ಎಂದು ಹೆಸರು ಪಡೆದಿರುವ ಜಿಲ್ಲೆ. ಇದೀಗ ಜಿಲ್ಲೆಯ ಕಾಂಗ್ರಸ್ ನಲ್ಲಿ ಭಿನ್ನಮತ ಶುರುವಾಗಿದೆ, ಕಾಂಗ್ರೆಸ್ ಆಡಳಿತವಿರುವ ಜಿಲ್ಲಾ ಪಂಚಾಯತ್'ನಲ್ಲೆ ಅಧ್ಯಕ್ಷರು ಕರೆದಿರುವ ಜಿಲ್ಲಾ ಪಂಚಾಯತ್ ಸಾಮಾನ್ಯಸಭೆಗೆ ಸದಸ್ಯರು ಗೈರಾಗಿದ್ದಾರೆ.
ಒಟ್ಟು 28 ಸ್ಥಾನಗಳ ಪೈಕಿ ಕಾಂಗ್ರೆಸ್ ನವರೇ 21 ಸದಸ್ಯರಿದ್ದಾರೆ. ಆದರೆ ಸಭೆಗೆ ಕೇವಲ ಅಧ್ಯಕ್ಷರು ಮಾತ್ರ ಭಾಗವಹಿಸುತ್ತಿದ್ದು, ಕಾಂಗ್ರೆಸ್ ಸದಸ್ಯರು ಭಾಗವಹಿಸುತ್ತಿಲ್ಲ. ಇದೀಗ ಜಿಪಂ ಸದಸ್ಯರು ಕೇಶರೆಡ್ಡಿ ಅವರು ಜಿಲ್ಲಾ ಪಂಚಾಯತ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವವರೆಗೂ ನಾವು ಸಭೆಗಳಿಗೆ ಭಾಗಿಯಾಗಲ್ಲ ಎಂದು ಹೇಳಿದ್ದಾರೆ.
ಚಿಕ್ಕಬಳ್ಳಾಪುರ ಶಾಸಕ ಡಾ. ಕೆ ಸುಧಾಕರ್ ಅವರು, ತಮ್ಮ ಕ್ಷೇತ್ರದಲ್ಲಿ ಮಾತ್ರವಲ್ಲದೇ, ಜಿಲ್ಲೆಯ ಬೇರೆ ಕ್ಷೇತ್ರಗಳಲ್ಲೂ ಕೂಡ ಪಕ್ಷ ವಿರೋಧ ಚಟುವಟಿಕೆಗಳನ್ನು ಮಾಡುತ್ತಿದ್ದಾರೆ ಎಂದು ಜಿಪಂ ಸದಸ್ಯರು ಆರೋಪಿಸಿದ್ದಾರೆ. ಮತ್ತೊಂದೆಡೆ ಜಿಪಂ ಅಧ್ಯಕ್ಷರು ಕಾಂಗ್ರೆಸ್ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಏಕಪಕ್ಷೀಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆಂದು ಸದಸ್ಯರು ಆರೋಪಿಸಿದ್ದಾರೆ.
