ಪಕ್ಷ ಮುಖಂಡನ ಮೇಲೆಯೇ ಕಾಂಗ್ರೆಸ್ ಶಾಸಕ ಷಡಕ್ಷರಿ ದರ್ಪ

First Published 6, Apr 2018, 10:47 AM IST
Congress MLA Shadakshari Harass Another Leader
Highlights

ತಿಪಟೂರು ಕಾಂಗ್ರೆಸ್ ಶಾಸಕ ಕೆ.ಷಡಕ್ಷರಿ ಮತ್ತೊಮ್ಮೆ ದರ್ಪ ತೋರಿದ್ದಾರೆ. ತಿಪಟೂರು ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್’ಗಾಗಿ ಅರ್ಜಿಹಾಕಿದ್ದ ಮುಖಂಡ ಜಿ.ನಾರಾಯಣ್’ಗೆ ಮತ್ತೇ ಬೆದರಿಕೆ ಹಾಕುತಿದ್ದಾರಂತೆ.

ತುಮಕೂರು : ತಿಪಟೂರು ಕಾಂಗ್ರೆಸ್ ಶಾಸಕ ಕೆ.ಷಡಕ್ಷರಿ ಮತ್ತೊಮ್ಮೆ ದರ್ಪ ತೋರಿದ್ದಾರೆ. ತಿಪಟೂರು ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್’ಗಾಗಿ ಅರ್ಜಿಹಾಕಿದ್ದ ಮುಖಂಡ ಜಿ.ನಾರಾಯಣ್’ಗೆ ಮತ್ತೇ ಬೆದರಿಕೆ ಹಾಕುತಿದ್ದಾರಂತೆ.

ಕಾಂಗ್ರೆಸ್ ನಿಂದ ನಾನು ಶಾಸಕನಾಗಿದ್ದರೂ ನನ್ನ ವಿರುದ್ದವೇ ಅರ್ಜಿ ಹಾಕುತ್ತೀಯಾ, ನಿನ್ನನ್ನು ಸುಮ್ಮನೆ ಬಿಡಲ್ಲಾ ಎಂದು ಬೆದರಿಕೆ ಹಾಕುತಿದ್ದಾರೆ ಎಂದು ಜಿ.ನಾರಯಣ್ ಆರೋಪಿಸಿದ್ದಾರೆ. ಜಿ.ಪಂ ಸದಸ್ಯನೂ ಆಗಿರುವ ಜಿ.ನಾರಾಯಣ್ ಶಾಷಕ ಷಡಕ್ಷರಿ ವಿರುದ್ದ ಈಗಾಗಲೇ ಕೆಪಿಸಿಸಿಗೆ ದೂರು ನೀಡಿದ್ದಾರೆ. ಕೆಪಿಸಿಸಿ ಕ್ರಮ ಕೈಗೊಳ್ಳದಿದ್ದರೆ ರಾಹುಲ್ ಗಾಂಧಿಯವರಿಗೂ ದೂರು ನೀಡಲು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.

ಶಾಸಕ ಷಡಕ್ಷರಿ ಅವರ ಮೇಲೆ ಹಲವು ಅಕ್ರಮಗಳ ಆರೋಪ ಇರುವುದರಿಂದ ಟಿಕೆಟ್ ಕೈ ತಪ್ಪಬಹುದು ಎಂಬ ಅನುಮಾನ ಇದೆ. ಹಾಗಾಗಿ ನಾನು ಅರ್ಜಿ ಹಾಕಿದ್ದೇನೆ ಎಂದು ಜಿ.ನಾರಯಣ್ ಹೇಳಿದ್ದಾರೆ. ಇದರಿಂದ ಕುಪಿತಗೊಂಡ ಶಾಸಕ ಷಡಕ್ಷರಿ ಬೆಂಬಿಡದೇ ಕಾಡುತಿದ್ದಾರೆ ಎಂದು ಆಪಾದಿಸಿದ್ದಾರೆ.

loader