ಬೆಂಗಳೂರಿನಲ್ಲಿ ಮತ್ತೋರ್ವ ಕಾಂಗ್ರೆಸ್ ಮುಖಂಡನ ಗೂಂಡಾಗಿರಿ

First Published 20, Feb 2018, 11:09 AM IST
Congress Leader Attack Officers
Highlights

ಕಾಂಗ್ರೆಸ್ ಶಾಸಕನ ಪುತ್ರನ ಗೂಂಡಾಗಿರಿ ಭಾರಿ ಸುದ್ದಿ ಮಾಡುತ್ತಿದ್ದಂತೆ ಇದೀಗ ಇದೇ ರೀತಿಯ ಇನ್ನೊಂದು ಪ್ರಕರಣ ಬೆಳಕಿಗೆ ಬಂದಿದೆ.

ಬೆಂಗಳೂರು : ಕಾಂಗ್ರೆಸ್ ಶಾಸಕನ ಪುತ್ರನ ಗೂಂಡಾಗಿರಿ ಭಾರಿ ಸುದ್ದಿ ಮಾಡುತ್ತಿದ್ದಂತೆ ಇದೀಗ ಇದೇ ರೀತಿಯ ಇನ್ನೊಂದು ಪ್ರಕರಣ ಬೆಳಕಿಗೆ ಬಂದಿದೆ.

ಬಿಬಿಎಂಪಿ ಕಚೇರಿಯಲ್ಲಿ ಶಾಸಕ ಭೈರತಿ ಬಸವರಾಜು ಆಪ್ತ ನಾರಾಯಣ ಸ್ವಾಮಿ ಗೂಂಡಾಗಿರಿ ನಡೆಸಿದ್ದಾರೆ. ಪೆಟ್ರೋಲ್ ಸುರಿದು ಸರ್ಕಾರಿ ಕಚೇರಿಗೆ ಬೆಂಕಿ ಹಚ್ಚಲು ಆತ ಮುಂದಾಗಿದ್ದಾರೆ.

 ಪಾಲಿಕೆ ಕಚೇರಿಗೆ ನುಗ್ಗಿದ  ವ್ಯಕ್ತಿ  ಖಾತೆ ಹಂಚಿಕೆ ಮಾಡಿಕೊಡದಿದ್ದರೆ ಬೆಂಕಿ ಹಚ್ಚುವುದಾಗಿ ಬೆದರಿಕೆ ಒಡ್ಡಿ ದರ್ಪ ಮೆರೆದಿದ್ದಾನೆ. ಹೊರಮಾವಿನಲ್ಲಿರುವ ಬಿಬಿಎಂಪಿ ಕಚೇರಿಯಲ್ಲಿ ಈತ ಗೂಂಡಾಗಿರಿ ತೋರಿಸಿದ್ದಾನೆ ಎನ್ನಲಾಗಿದೆ.  

loader