ಬೆಂಗಳೂರಿನಲ್ಲಿ ಮತ್ತೆ ಕಾಂಗ್ರೆಸ್ ಮುಖಂಡನೋರ್ವನ ಅಟ್ಟಹಾಸ

First Published 20, Mar 2018, 1:20 PM IST
Congress Leadear Attack Man In Bengaluru
Highlights

ಬೆಂಗಳೂರಿನ ಕೆ.ಆರ್ ಪುರದಲ್ಲಿ ನಡೆದಿದೆ. ಭೈರತಿ ಬಸವರಾಜ್ ಬೆಂಬಲಿಗನಾದ ಕಾಂಗ್ರೆಸ್ ಯುವ ಮುಖಂಡ ಸುರೇಶ್ ಎನ್ನುವಾತ ಹಲ್ಲೆ ನಡೆಸಿದ್ದಾರೆ.

ಬೆಂಗಳೂರು : ರಸ್ತೆಯ ಮಧ್ಯೆ ಪಾರ್ಟಿ ಮಾಡುತ್ತಿದ್ದುದನ್ನು ಪ್ರಶ್ನೆ ಮಾಡಿದ್ದಕ್ಕೆ ವ್ಯಕ್ತಿಯೋರ್ವನಿಗೆ ಚಾಕುವಿನಿಂದ ಇರಿದ ಘಟನೆ ಬೆಂಗಳೂರಿನ ಕೆ.ಆರ್ ಪುರದಲ್ಲಿ ನಡೆದಿದೆ. ಭೈರತಿ ಬಸವರಾಜ್ ಬೆಂಬಲಿಗನಾದ ಕಾಂಗ್ರೆಸ್ ಯುವ ಮುಖಂಡ ಸುರೇಶ್ ಎನ್ನುವಾತ ಹಲ್ಲೆ ನಡೆಸಿದ್ದಾರೆ.

ಮಧ್ಯ ರಾತ್ರಿ ವೇಳೆಗೆ ಈ ಘಟನೆ ನಡೆದಿದ್ದು, ವೈಯಕ್ತಿಕ ಕಾರಣಕ್ಕಾಗಿ  ಕೃತ್ಯ ನಡೆಸಲಾಗಿದೆ ಎಂದು ಶಂಕೆ ವ್ಯಕ್ತವಾಗಿದೆ. ಪರಮೇಶ್ ಎನ್ನುವ ವ್ಯಕ್ತಿಗೆ ಚಾಕುವಿನಿಂದ ಇರಿಯಲಾಗಿದೆ. ಈ ಸಂಬಂಧ ಕಾಡುಗೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

loader