ಕೇಂದ್ರ ಸರ್ಕಾರ 500 ಮತ್ತು ಸಾವಿರ ರೂ ನೋಟು ನಿಷೇಧ ಖಂಡಿಸಿ ವಿಪಕ್ಷಗಳು ಇದೆ 28 ರಂದು ಭಾರತ್ ಬಂದ್ ಕರೆ ನೀಡಿವೆ. ಈ ಕುರಿತು ಮಂಡ್ಯದ ಸುಭಾಷ್ ನಗರದಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತರ ಸಭೆ ಕರೆಯಲಾಗಿತ್ತು.
ಮಂಡ್ಯ (ನ.25): ಕೇಂದ್ರ ಸರ್ಕಾರ 500 ಮತ್ತು ಸಾವಿರ ರೂ ನೋಟು ನಿಷೇಧ ಖಂಡಿಸಿ ವಿಪಕ್ಷಗಳು ಇದೆ 28 ರಂದು ಭಾರತ್ ಬಂದ್ ಕರೆ ನೀಡಿವೆ. ಈ ಕುರಿತು ಮಂಡ್ಯದ ಸುಭಾಷ್ ನಗರದಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತರ ಸಭೆ ಕರೆಯಲಾಗಿತ್ತು.
ಸಭೆಯಲ್ಲಿ ಜಿಲ್ಲಾಧ್ಯಕ್ಷ ಆತ್ಮಾನಂದ, ಮಾಜಿ ಸಂಸದೆ ರಮ್ಯಾ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದರು. ಸಭೆ ಆರಂಭವಾಗುತ್ತಿದ್ದಂತೆ ಕಾರ್ಯಕರ್ತರು ಸಿಎಂ ಸಿದ್ದರಾಮಯ್ಯ ಸೇರಿ ಜಿಲ್ಲೆಯ ಕಾಂಗ್ರೆಸ್ ಮುಖಂಡರ ವಿರುದ್ದ ಅಸಮಧಾನ ವ್ಯಕ್ತಪಡಿಸಿದ್ರು. ಜಿಲ್ಲೆಯಲ್ಲಿ ಪಕ್ಷದ ಮುಖಂಡರ ಹಿಂದೆ ಹೋದ ಕಾರ್ಯಕರ್ತರಿಗೆ ಮಾತ್ರ ಮನ್ನಣೆ ಸಿಗುತ್ತಿರೋದಾಗಿ ಅಸಮಧಾನ ವ್ಯಕ್ತಪಡಿಸಿದರು.
ಅಲ್ಲದೆ ಸಿಎಂ ಸಿದ್ದರಾಮಯ್ಯ ವಿರುದ್ದ ಕಿಡಿ ಕಾರಿದ ಕಾರ್ಯಕರ್ತರು ಮಂಡ್ಯದ ಕಾಂಗ್ರೆಸ್ ನಾಯಕರನ್ನು ಕಡೆಗಣಿಸುತ್ತಿರುವುದಾಗಿ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಪ್ರಾಮಾಣಿಕ ಕಾರ್ಯಕರ್ತರಿಗೆ ಅನ್ಯಾಯವಾಗುತ್ತಿದೆ ಎಂದು ಜಿಲ್ಲಾಧ್ಯಕ್ಷರನ್ನು ತರಾಟೆಗೆ ತೆಗೆದುಕೊಂಡರು. ಈ ಸಂಧರ್ಭದಲ್ಲಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದು ಸಭೆಯಲ್ಲಿ ಗೊಂದಲವುಂಟಾಯಿತು. ಸಭೆಯಲ್ಲಿದ್ದ ಮಾಜಿ ಸಂಸದೆ ರಮ್ಯಾ ಮಂಡ್ಯದಲ್ಲಿ ಆಗುತ್ತಿರುವ ಸಮಸ್ಯೆಗಳನ್ನು ಸರಿಪಡಿಸೋದಾಗಿ ತಿಳಿಸಿ ಸೋಮವಾರ ಬಂದ್ ಆಚರಿಸಲಾಗಿದೆ ಎಂದರೆ ಜಿಲ್ಲಾಧ್ಯಕ್ಷ ಆತ್ಮಾನಂದ ಕೇಂದ್ರ ಮತ್ತು ರಾಜ್ಯ ನಾಯಕರಿಂದ ಭಾರತ್ ಬಂದ್ ಆಚರಿಸಲು ಆದೇಶ ಬಂದಿದೆ. ಸೋಮವಾರ ಜಿಲ್ಲೆಯಲ್ಲಿ ಭಾರತ್ ಬಂದ್ ನಡೆಯಲಿದೆ ಎಂದಿದ್ದಾರೆ.
