ಗೋ ಮಾಂಸ ತಿನ್ನೋದು, ಬಿಡೋದು ನನ್ನ ಹಕ್ಕು: ಸಿಎಂ ಸಿದ್ದರಾಮಯ್ಯ

CM Siddaramaiah says eating beef is his right
Highlights

'ಗೋ ಮಾಂಸ ತನ್ನೋದು, ಬಿಡೋದು ನನ್ನ ಹಕ್ಕು . ಅದನ್ನ ಕೇಳಲು ಬಿಜೆಪಿ ನಾಯಕರಿಗೆ ಹಕ್ಕು ಕೊಟ್ಟುವರು ಯಾರು,' ಎಂದು ಸಿಎಂ ಸಿದ್ದರಾಮಯ್ಯ ಬಿಜೆಪಿ ನಾಯಕರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.

ಮೈಸೂರು: 'ಗೋ ಮಾಂಸ ತನ್ನೋದು, ಬಿಡೋದು ನನ್ನ ಹಕ್ಕು . ಅದನ್ನ ಕೇಳಲು ಬಿಜೆಪಿ ನಾಯಕರಿಗೆ ಹಕ್ಕು ಕೊಟ್ಟುವರು ಯಾರು,' ಎಂದು ಸಿಎಂ ಸಿದ್ದರಾಮಯ್ಯ ಬಿಜೆಪಿ ನಾಯಕರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.

'ಯುಪಿಯಲ್ಲಿ ಅತಿ ಹೆಚ್ಚು ದನದ ಮಾಂಸ ಮಾರಾಟ ಮಾಡ್ತಿರಿ. ಅಲ್ಲಿ ಯಾಕೆ ದನದ ಮಾಂಸ ಮಾರಾಟ ನಿಶೇಧಿಸಿಲ್ಲ,' ಎಂದು ಪ್ರಶ್ನಿಸಿದರು. 

'ಸಿಎಂ ಕೊಲೆ ಆಯ್ತದೆ ಅಂತಾ ಸ್ಟೇಟ್‌ಮೆಂಟ್ ಕೊಡೋ ಆ ಬೆಜೆಪಿ ಮುಖಂಡ ಈಶ್ವರಪ್ಪ ಒಬ್ಬ ಮೂರ್ಖ. ಸಿಎಂ ರಕ್ತದಲ್ಲಿ ಟಿಪ್ಪು ರಕ್ತ ಹರಿತದೆ ಅಂತಾ ಟೀಕೆ ಮಾಡ್ತಾರೆ. ಇದನ್ನೆಲಾ ನಾನು ಸಹಿಸಿಕೊಳ್ಳಬೇಕಾ? ಸಂಸ್ಕೃತಿ ಬಗ್ಗೆ ಮಾತನಾಡ್ತಾರೆ,' ಎಂದು ಟೀಕಿಸದರು. 

'ನಾನು ಮತ್ತೆ ಸಿಎಂ ಆಗದಿದ್ರು ಪರವಾಗಿಲ್ಲ. ಕೋಮುವಾದಿಗಳನ್ನ ಅಧಿಕಾರದಿಂದ ದೂರ ಇಡಿ,' ಎಂದು ಆಗ್ರಹಿಸಿದರು.
 

loader