ಸಿಎಂ ತಲೆಯಲ್ಲಿ ಶುಗರ್ ಕೋಟೆಡ್ ಯೂರಿಯಾ ಇದೆ

First Published 8, Mar 2018, 4:30 PM IST
CM has sugar coated urea in his head
Highlights

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ವಿಧಾನ ಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಅವರ ನಡುವಿನ ಖಾಲಿ ತಲೆ, ಕಡಿಮೆ ಬುದ್ದಿ ಸಮರ ಮುಂದುವರಿದಿದ್ದು, ಮುಖ್ಯಮಂತ್ರಿ ಪ್ರತಿಕ್ರಿಯೆಗೆ ಈಶ್ವರಪ್ಪ ಪ್ರತ್ಯುತ್ತರ ನೀಡಿದ್ದಾರೆ.

ಬಾಗಲಕೋಟೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ವಿಧಾನ ಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಅವರ ನಡುವಿನ ಖಾಲಿ ತಲೆ, ಕಡಿಮೆ ಬುದ್ದಿ ಸಮರ ಮುಂದುವರಿದಿದ್ದು, ಮುಖ್ಯಮಂತ್ರಿ ಪ್ರತಿಕ್ರಿಯೆಗೆ ಈಶ್ವರಪ್ಪ ಪ್ರತ್ಯುತ್ತರ ನೀಡಿದ್ದಾರೆ.

'ಸಿಎಂ ತಲೆಯಲ್ಲಿ ಮೆದುಳಿಲ್ಲ. ಬದಲಾಗಿ ಶುಗರ್ ಕೋಟೆಡ್ ಯೂರಿಯಾ ಗೊಬ್ಬರ ಇದೆ. ಏನು ಬೇಕಾದರೂ ಮಾತನಾಡೋದು ಸಿಎಂ ಅಥವಾ ನಾನಾ ಅನ್ನೋದು ಹೇಳಲಿ? ಭ್ರಷ್ಟರನ್ನ ದೂರ ಇಡ್ತೀವಿ ಅಂದವರು ಆಶೋಕ ಖೇಣಿಯನ್ನು ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ,' ಎಂದು ಹೇಳಿದ್ದಾರೆ.

'ಪರಮೇಶ್ವರ್ ಅವರನ್ನ ನಾನು ಸೋಲಿಸಿಲ್ಲವೆಂದು ಸಿಎಂ ಚಾಮುಂಡೇಶ್ವರಿ ಮೇಲೆ ಆಣೆ ಮಾಡಲಿ. ಸಿಎಂಗೆ ಪೈಪೋಟಿ ಅಂತ ಪಕ್ಷದವರನ್ನೇ ಮುಗಿಸೋ ನೀಚ ರಾಜಕಾರಣಿಗೆ ನಾನು ಉತ್ತರ ಕೊಡಬೇಕಾ?  ಹಿಂದುಳಿದ ದಲಿತರನ್ನ ಕಡೆಗಣಿಸಿದವರ ಬಗ್ಗೆ ನಾನು ಹೆಚ್ಚಿಗೆ ಹೇಳೋದಿಲ್ಲ,' ಎಂದರು.

loader