ಮದರಸಾ ಬಂದ್‌ನಿಂದ ಸಮಾಜಕ್ಕೆ ನಷ್ಟ: ತನ್ವೀರ್ ಸೇಠ್

districts | Saturday, January 13th, 2018
Suvarna Web Desk
Highlights

ಮುಸ್ಲಿಮರನ್ನು ದುಷ್ಮನಿ ಎಂದು ಪರಿಗಣಿಸೋ ಪಕ್ಷ ರಾಜ್ಯದಲ್ಲಿದ್ದು, ಈ ಬಗ್ಗೆ ಎಚ್ಚರವಾಗಿರಬೇಕೆಂದು ಪ್ರಾಥಮಿಕ ಶಿಕ್ಷಣ ಸಚಿವ ತನ್ವೀರ್ ಸೇಠ್ ಹೇಳಿದ್ದಾರೆ.

ಧಾರವಾಡ: 'ಮದರಸಾ ಬಂದ್‌ನಿಂದ ಸಮಾಜಕ್ಕೆ ಸಾಕಷ್ಟು ನಷ್ಟವಾಗುತ್ತದೆ. ಈ ಬಗ್ಗೆ ಗಂಭೀರವಾಗಿ ಚಿಂತಿಸಬೇಕು. ಉರ್ದು ಭಾಷೆ ಸಂಕಷ್ಟದಲ್ಲಿದ್ದು, ಮಾತೃ ಭಾಷೆ ಅವನತಿಯನ್ನು ನಾವು ಸಹಿಸುವುದಿಲ್ಲ,' ಎಂದು ಪ್ರಾಥಮಿಕ ಶಿಕ್ಷಣ ಸಚಿವ ತನ್ವೀರ್ ಸೇಠ್ ಹೇಳಿದ್ದಾರೆ.

'ಉರ್ದು ಶಾಲೆ ಬಂದ್ ಆಗುತ್ತಿವೆ . ಇದಕ್ಕೆ ಹೊಣೆ ಯಾರು? ಉಪನ್ಯಾಸ ನೀಡುವುದು ನಮ್ಮ ಕೆಲಸವಲ್ಲ.  ಸಮಾಜದ ಮಕ್ಕಳು ದಾರಿ ತಪ್ಪಬಾರದು, ಸುಶಿಕ್ಷಿತರಾಗಬೇಕು, ಇಲ್ಲದಿದ್ದರೆ ನಮಗೇ ನಷ್ಟ. ಸಮಾಜದ ಜನತೆ ಮುಂದುವರೆಯಬೇಕಾದರೆ ಸಹಾಯ, ಸಹಕಾರ  ಅಗತ್ಯ,' ಎಂದರು.

ಕರ್ನಾಟಕ ರಾಜ್ಯ ಸರ್ಕಾರಿ ಮುಸ್ಲಿಂ ನೌಕರರ ವೇಲ್ ಫೇರ್ ಅಸೋಸಿಯೇಷನ್ ಸಮ್ಮೇಳನದಲ್ಲಿ ಭಾಗಿಯಾಗಿ ಸಮಾಜ ಭಾಂದವರನ್ನು ಉದ್ದೇಶಿಸಿ ಮಾತನಾಡಿದ ಸೇಠ್, 'ಅವನತಿಯನ್ನು ನಾವು ಸಹಿಸುವುದಿಲ್ಲ. ಸಮಯದ ಸಂದಿಗ್ಧತೆಯನ್ನು ಅರಿತುಕೊಳ್ಳಬೇಕು,' ಎಂದರು.

'ನಮ್ಮನ್ನು ದುಷ್ಮನಿ ಮಾಡೋ ಪಕ್ಷ ರಾಜ್ಯದಲ್ಲಿಯೂ ಇದೆ. ಈ ಬಗ್ಗೆ ನಾವೆಲ್ಲ ಎಚ್ಚರವಹಿಸಬೇಕು. ಹಾಗಂತ ಎಲ್ಲರೂ ವಿರೋಧಿಸಬೇಕೆಂದು ಅರ್ಥವಲ್ಲ. ನಮ್ಮ ಜನರಿದ್ದಲ್ಲ ಸೌಲಭ್ಯ ಸಿಗಲಿ ಎನ್ನುವುದು ನಮ್ಮ ಉದ್ದೇಶ,' ಎಂದು ಹೇಳಿದರು.

Comments 0
Add Comment

    Related Posts