ಬಡ ರೈತರಿಗೆ, ಕಾರ್ಮಿಕರಿಗೆ, ದಲಿತರಿಗೆ, ಬಡವರಿಗೆ ಮತ್ತು ವಸತಿ ರಹಿತರಿಗೆ ಭೂಮಿ ಮತ್ತು ಮನೆ, ನಿವೇಶನಕ್ಕಾಗಿ ಆಗ್ರಹಿಸಿ ಸಿಐಟಿಯು ಮತ್ತು ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರು ಶುಕ್ರವಾರ ಜೈಲ್ ಬರೋ ಪ್ರತಿಭಟನೆ ನಡೆಸಿದರು.
ಹಾಸನ (ನ.18): ಬಡ ರೈತರಿಗೆ, ಕಾರ್ಮಿಕರಿಗೆ, ದಲಿತರಿಗೆ, ಬಡವರಿಗೆ ಮತ್ತು ವಸತಿ ರಹಿತರಿಗೆ ಭೂಮಿ ಮತ್ತು ಮನೆ, ನಿವೇಶನಕ್ಕಾಗಿ ಆಗ್ರಹಿಸಿ ಸಿಐಟಿಯು ಮತ್ತು ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರು ಶುಕ್ರವಾರ ಜೈಲ್ ಬರೋ ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿಗೆ ಪ್ರತಿಭಟನಕಾರರು ಮುತ್ತಿಗೆ ಹಾಕಲು ಮುಂದಾದ ಪರಿಣಾಮ ಸಿಐಟಿಯು ರಾಜ್ಯಾಧ್ಯಕ್ಷ ವರಲಕ್ಷ್ಮಿ, ಜಿಲ್ಲಾಧ್ಯಕ್ಷ ಧರ್ಮೇಶ್, ಕೆಪಿಆರ್‌ಎಸ್ ನವೀನ್ ಕುಮಾರ್, ಅರವಿಂದ್, ಎಂ.ಜಿ.ಪೃಥ್ವಿ ಸೇರಿದಂತೆ ಸಾಕಷ್ಟು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು.
ಪ್ರತಿಭಟನಕಾರರು ನಗರದ ಹೇಮಾವತಿ ಪ್ರತಿಮೆಯಿಂದ ಪ್ರತಿಭಟನೆಯನ್ನು ಪ್ರಾರಂಭಿಸಿ ಎನ್.ಆರ್.ವೃತ್ತದ, ಬಿ.ಎಂ.ರಸ್ತೆಯ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಬಂದು ಧರಣಿ ನಡೆಸಿದರು.
ಪ್ರತಿಭಟನಕಾರರನ್ನು ಬಂಧಿಸುವಾಗ ಪ್ರತಿರೋಧ ತೋರಿದಂತಹ ಕಾರ್ಯಕರ್ತರನ್ನು ಬಲವಂತವಾಗಿ ಬಂಧಿಸುವಾಗ ಕೆಲವರ ಮೇಲೆ ಪೊಲೀಸ್‌ರಿಂದ ಹಲ್ಲೆ ನಡೆಯಿತು. ಜಿಲ್ಲಾಧಿಕಾರಿ ಕಚೇರಿಯ ಹೊರಗಡೆ ಇದ್ದ ಸಾಕಷ್ಟು ಪ್ರತಿ‘ಟನಕಾರರನ್ನು ಪೊಲೀಸರು ಚದುರಿಸಿದರು.
ಪೊಲೀಸರ ವಿರುದ್ಧ ಧಿಕ್ಕಾರ:
ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ ಹಾಕಲು ಮುಂದಾದವರನ್ನು ಬಂಧಿಸಿದ್ದು, ಕೂಡಲೇ ಅವರನ್ನು ಬಿಡುಗಡೆ ಮಾಡುವಂತೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನಕಾರರು ಧರಣಿ ನಡೆಸಿ ಜಿಲ್ಲಾಧಿಕಾರಿ ವಿ.ಚೈತ್ರ ಅವರಿಗೆ ಮನವಿ ನೀಡಿದರು. ಬಂಧಿಸಿರುವವರನ್ನು ಬಿಡುಗಡೆ ಮಾಡುವ ತನಕ ತಾವು ಸ್ಥಳಬಿಟ್ಟ ಕದಲುವುದಿಲ್ಲ ಎಂದು ಪ್ರತಿ‘ಟನಕಾರರ ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಅವರನ್ನು ಸಹ ಪೊಲೀಸರು ಬಂಧಿಸಿದರು. ಈ ಸಂದ‘ರ್ದಲ್ಲಿ ಪೊಲೀಸರು ದೌರ್ಜನ್ಯ ಎಸಗುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆಗ್ರಹ:
ಪ್ರತಿಯೊಬ್ಬ ನಾಗರಿಕರಿಗೂ ಅಗತ್ಯವಿರುವ ವಸತಿ, ಆಹಾರ, ಶಿಕ್ಷಣ, ಆರೋಗ್ಯ, ಉದ್ಯೋಗ ಇಂತಹ ಮೂಲ‘ೂತ ಅವಶ್ಯಕತೆಗಳನ್ನು ಪೂರೈಸಿಕೊಳ್ಳುವ ಅವಕಾಶಗಳನ್ನು ಒದಗಿಸಿಕೊಡುವುದು ಯಾವುದೇ ನಾಗರೀಕ ಸರ್ಕಾರದ ಜವಾಬ್ಧಾರಿಯಾಗಿದೆ. ಆದರೆ ಸರ್ಕಾರಗಳು ತನ್ನ ಈ ಹೊಣೆಗಾರಿಕೆಗಳನ್ನು ಸರಿಯಾಗಿ ನಿರ್ವಹಿಸದ ಕಾರಣವಾಗಿ ಬಹುತೇಕ ಜನರು ತಮ್ಮ ಹಾಗೂ ತಮ್ಮ ಕುಟುಂಬದ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಅತ್ಯಂತ ಹೆಚ್ಚು ಕಷ್ಟಪಡಬೇಕಾದ ಪರಿಸ್ಥಿತಿಯಿದೆ.
ಅಗತ್ಯ ವಸ್ತುಗಳು ಅತ್ಯಂತ ದುಬಾರಿಯಾಗಿದ್ದು, ಬಹುತೇಕ ಜನರು ತಮ್ಮ ದುಡಿಮೆಯಿಂದ ಬರುವ ಅತ್ಯಲ್ಪ ಆದಾಯದಲ್ಲಿ ಎಲ್ಲಾ ಅಗತ್ಯಗಳನ್ನು ಪೂರೈಸಿಕೊಳ್ಳಲು ಬಹಳ ಕಷ್ಟವಾಗಿದೆ. ಇಂತಹ ಸಂದ‘ರ್ದಲ್ಲಿ ವಾಸಕ್ಕೆ ಸ್ವಂತ ಸಣ್ಣ ಮನೆಯನ್ನಾದರೂ ಮಾಡಿಕೊಳ್ಳಬೇಕೆನ್ನುವ ಬಹುತೇಕ ಜನರ ಕನಸು ನನಸಾಗದೆ ಬಾಡಿಗೆ ಮನೆಗಳಲ್ಲಿ, ಸಣ್ಣ ಮನೆಗಳಲ್ಲಿ ಮೂರು ನಾಲ್ಕು ಕುಟುಂಬಗಳು ಬದುಕಬೇಕಾದ ಅನಿವಾರ್ಯ ಪರಿಸ್ಥಿತಿಯಿದೆ. ತಮ್ಮ ದುಡಿಮೆಯಿಂದ ಬರುವ ಅತ್ಯಲ್ಪ ಆದಾಯದಲ್ಲಿ ಜೀವನ ಸಾಗಿಸುವುದೇ ಕಷ್ಟವಾಗಿರುವಾಗ ಅನಿವಾರ್ಯವಾಗಿ ಬಾಡಿಗೆ ಮನೆಗಳಲ್ಲಿ ಬದುಕುತ್ತಾ ತಮ್ಮ ದುಡಿಮೆಯ ಬಹುಪಾಲು ಹಣವನ್ನು ಬಾಡಿಗೆ ಕಟ್ಟಲು ಬಳಸಬೇಕಾದ ಅನಿವಾರ್ಯ ಸಂದರ್ಭರ್ದಲ್ಲಿ ಬಹುತೇಕರು ಬದುಕುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸದಿರು.
ಜಿಲ್ಲೆಯಲ್ಲಿ ಸಾವಿರಾರು ಬಡ ಬಗರ್‌ಹುಕುಂ ಸಾಗುವಳಿದಾರರು ತಮ್ಮ ಸಾಗುವಳಿ ಭೂಮಿಯನ್ನು ಮಂಜೂರು ಮಾಡಿಸಿಕೊಳ್ಳಲು ಸರ್ಕಾರದ ಮುಂದೆ ಅರ್ಜಿಗಳನ್ನು ಸಲ್ಲಿಸಿ ಕಾಯುತ್ತಿದ್ದಾರೆ. ಬಡವರಿಗೆ ಕೇವಲ ಭರವಸೆ ನೀಡುತ್ತಿರುವ ಸರ್ಕಾರಗಳು ಅದಕ್ಕೆ ಅಡ್ಡಿಯಾಗಿರುವ ಕಾನೂನುಗಳಿಗೆ ತಿದ್ದುಪಡಿ ತಂದು ಬಡವರಿಗೆ ಭೂಮಿಯನ್ನು ಮಂಜೂರು ಮಾಡುವ ಯಾವ ಪ್ರಾಮಾಣಿಕ ಪ್ರಯತ್ನವನ್ನೂ ಮಾಡುತ್ತಿಲ್ಲ ಎಂದು ಕಿಡಿಕಾರಿದರು.
ಹೋರಾಟ ಹತ್ತಿಕ್ಕುವ ಪ್ರಯತ್ನ:
ಜಿಲ್ಲೆಯಲ್ಲಿ ಮನೆ, ನಿವೇಶನ ಹಾಗೂ ಹಕ್ಕುಪತ್ರಕ್ಕಾಗಿ ಸಾವಿರಾರು ಅರ್ಜಿಗಳನ್ನು ಗ್ರಾಪಂ ಮತ್ತು ಮುನಿಸಿಪಾಲಿಟಿಗಳಲ್ಲಿ ಸಲ್ಲಿಸಿ ಸ್ವೀಕೃತಿ ಪತ್ರ ಪಡೆಯಲಾಗಿದೆ. ಗ್ರಾಪಂ ಹಾಗೂ ಮುನಿಸಿಪಾಲಿಟಿ ಗಳಲ್ಲಿ ಬಡವರಾದ ವಸತಿ ರಹಿತರು ಮನೆ, ನಿವೇಶನಕ್ಕಾಗಿ ಸಾಮೂಹಿಕವಾಗಿ ಅರ್ಜಿ ಸಲ್ಲಿಸಲು ಮುಂದಾದಾಗ ಕೆಲವು ಕಡೆಗಳಲ್ಲಿ ಕೆಲ ಸ್ಥಳೀಯ ಪಟ್ಟಭದ್ರ ಹಿತಾಸಕ್ತಿಗಳು ಬಡ ಅರ್ಜಿದಾರರನ್ನು ತಡೆಯುವ ಪ್ರಯತ್ನ ಮಾಡಿದ್ದಾರೆ.
