ಪೋಷಕರೇ ನಿಮ್ಮ ಮಕ್ಕಳನ್ನು ಬಿಸಿಲಿಗೆ ಕರೆದುಕೊಂಡು ಹೋಗಬೇಡಿ. ಅದರಲ್ಲೂ ನವಜಾತ ಶಿಶುಗಳನ್ನು ಅಪ್ಪಿತಪ್ಪಿಯೂ ಹೊರಗೆ ಕರೆದುಕೊಂಡು ಹೋದಿರಿ ಜೋಕೆ. ಯಾಕೆಂದರೆ ಬಳ್ಳಾರಿ ಬಿರುಬಿಸಿಲಿಗೆ ಪ್ರತಿದಿನ ಕನಿಷ್ಠ 10ಕ್ಕೂ ಹೆಚ್ಚು ಮಕ್ಕಳು ವಿವಿಧ ರೋಗಗಳಿಗೆ ತುತ್ತಾಗಿದ್ದಾರೆ. ರಣಬೇಸಿಗೆ ಪರಿಣಾಮ ಹಸುಗೂಸುಗಳಿಗೆ ವಿವಿಧ ಸಮಸ್ಯೆ ಎದುರಾಗುತ್ತಿದೆ. ಈ ಕುರಿತಾದ ೊಂದು ವರದಿ

ಬಳ್ಳಾರಿ(ಎ.11): ಪೋಷಕರೇ ನಿಮ್ಮ ಮಕ್ಕಳನ್ನು ಬಿಸಿಲಿಗೆ ಕರೆದುಕೊಂಡು ಹೋಗಬೇಡಿ. ಅದರಲ್ಲೂ ನವಜಾತ ಶಿಶುಗಳನ್ನು ಅಪ್ಪಿತಪ್ಪಿಯೂ ಹೊರಗೆ ಕರೆದುಕೊಂಡು ಹೋದಿರಿ ಜೋಕೆ. ಯಾಕೆಂದರೆ ಬಳ್ಳಾರಿ ಬಿರುಬಿಸಿಲಿಗೆ ಪ್ರತಿದಿನ ಕನಿಷ್ಠ 10ಕ್ಕೂ ಹೆಚ್ಚು ಮಕ್ಕಳು ವಿವಿಧ ರೋಗಗಳಿಗೆ ತುತ್ತಾಗಿದ್ದಾರೆ. ರಣಬೇಸಿಗೆ ಪರಿಣಾಮ ಹಸುಗೂಸುಗಳಿಗೆ ವಿವಿಧ ಸಮಸ್ಯೆ ಎದುರಾಗುತ್ತಿದೆ. ಈ ಕುರಿತಾದ ೊಂದು ವರದಿ

ಬಳ್ಳಾರಿಯಲ್ಲಿ ಪ್ರತಿದಿನ 40 ಡಿಗ್ರಿ ಉಷ್ಣಾಂಶ ಮೀರುತ್ತಿದೆ. ಆಕಾಶದಿಂದ ಸೀಳಿ ಬರುವ ಸೂರ್ಯನ ಕಿರಣದ ಕಾವಿಗೆ ನಿತ್ಯ 10ಕ್ಕೂ ಕಂದಮ್ಮಗಳು ವಿವಿಧ ಕಾಯಿಲೆಗಳಿಗೆ ತುತ್ತಾಗಿ ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೀತಿದ್ದಾರೆ. ನಿರ್ಜಲೀಕರಣದಿಂದಾಗಿ ಮಕ್ಕಳ ದೇಹದ ಮೇಲೆ ಅನೇಕ ಬಗೆಯ ಪರಿಣಾಮ ಬೀರುತ್ತಿವೆ. ಗರಿಷ್ಠ ಉಷ್ಣತೆಯಿಂದಾಗಿ ಕಂದಮ್ಮಗಳಲ್ಲಿ ಮೂತ್ರಪಿಂಡ ವೈಫಲ್ಯ ಸಮಸ್ಯೆ ಉಂಟಾಗಬಹುದು.

ಇನ್ನು ನಗರದಲ್ಲಿರುವ 48 ಖಾಸಗಿ ಆಸ್ಪತ್ರೆಗಳಲ್ಲಿ ಅದೆಷ್ಟು ಮಕ್ಕಳು ಒಳರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನುವುದರ ಅಧಿಕೃತ ಮಾಹಿತಿಗಳಿಲ್ಲ. ಕಳೆದ ವರ್ಷ ಮೇ ತಿಂಗಳಾಂತ್ಯದಲ್ಲಿ ಈ ರೀತಿಯ ಸಮಸ್ಯೆ ಹೆಚ್ಚಾಗುತ್ತಿತ್ತು. ಆದರೆ ಈ ಬಾರಿ ಏಪ್ರಿಲ್ ಆರಂಭದಲ್ಲೇ ಎದುರಾಗಿ ಆತಂಕ ಸೃಷ್ಟಿಸಿದೆ.

ಒಟ್ಟಿನಲ್ಲಿ ಬಳ್ಳಾರಿಯಲ್ಲಿ ಕೆಂಡದಂಥ ಬಿಸಿಲಿಗೆ ಪುಟ್ಟ ಪುಟ್ಟ ಕಂದಮ್ಮ, ನವಜಾತ ಶಿಶುಗಳು ರೋಸಿ ಹೋಗಿವೆ. ಮಾರಕ ಕಾಯಿಲೆಗಳಿಗೆ ಹಸುಗೂಸುಗಳು ತುತ್ತಾಗುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆಗಳು, ಖಾಸಗಿ ಆಸ್ಪತ್ರೆಗಳು ಭರ್ತಿಯಾಗಿವೆ. ಇದೇ ರೀತಿ ಸುಡುಬಿಸಿಲು ಮುಂದುವರಿದ್ರೆ ಗಣಿನಾಡಲ್ಲಿ ಬದುಕುವುದೇ ಕಷ್ಟವಾಗಿದೆ.