ಕನ್ನಡನಾಡಲ್ಲಿ ಕನ್ನಡಿಗರಿಗೆ ಇದೆಂಥಾ ಅವಸ್ಥೆ?

First Published 20, Jan 2018, 11:13 AM IST
Cab driver attacked by Assam youths in Bengaluru
Highlights

ಕ್ಯಾಬ್‌ಗೆ ಡಿಕ್ಕಿ ಹೊಡೆದ ಸ್ಕೂಲ್ ಬಸ್. ಪ್ರಶ್ನಿಸಿದ್ದಕ್ಕೆ ದುಡ್ಡು ಕೊಡುವುದಾಗಿ ಹೇಳಿ, ಅಸ್ಸಾಮ್ ಯುವಕರಿದ್ದ ಕಾಲೋನಿಗೆ ಕರೆದೋಯ್ದು, ಹಲ್ಲೆ.

ಬೆಂಗಳೂರು: 'ಕನ್ನಡದಲ್ಲಿ ಮಾತಾನಾಡು...' ಎಂದಿದ್ದಕ್ಕೆ ಅಸ್ಸಾಂ ಮೂಲದ ಯುವಕರು ಕ್ಯಾಬ್ ಚಾಲಕನ ಮೇಲೆ ಬೆಂಗಳೂರಿನ ವರ್ತೂರಿನಲ್ಲಿ ಹಲ್ಲೆ ನಡೆಸಿದ್ದಾರೆ.  

ಅಸ್ಸಾಂ ಮೂಲಕ ಗುಂಪು ಕ್ಯಾಬ್ ಚಾಲಕ ಮನು ಎಂಬಾತನ ಮೇಲೆ ಹಲ್ಲೆ ನಡೆಸಿದ್ದಾರೆ. ಕ್ಯಾಬ್‌ಗೆ ಸ್ಕೂಲ್ ಬಸ್‌ವೊಂದು ಡಿಕ್ಕಿ ಹೊಡೆದಿತ್ತು. ಇದನ್ನು ಮನು ಪ್ರಶ್ನಿಸಿದ್ದರು. ತಪ್ಪಿಗೆ ಹಣ ನೀಡುವುದಾಗಿ ಹೇಳಿ, ಅಸ್ಸಾಂ ಯುವಕರು ವಾಸವಿದ್ದ ಕಾಲೋನಿಗೆ ಕರೆದೊಯ್ದಿದ್ದರು. ಅಲ್ಲಿ, 'ಕನ್ನಡದಲ್ಲಿ ಮಾತಾನಾಡು' ಎಂದಿದ್ದಕ್ಕೆ ಮನು ಮೇಲೆ ಹಲ್ಲೆ ನಡೆಸಿದ್ದಾರೆ. 

ಈ ಬಗ್ಗೆ ವರ್ತೂರು ಠಾಣೆಯಲ್ಲಿ ದೂರು ದಾಖಲಾಗಿದೆ.

loader