- ಇತ್ತ ಸಿದ್ದರಾಮಯ್ಯ ಸರಕಾರ್ ಆರಂಭಿಸಿದೆ ಇಂದಿರಾ ಕ್ಯಾಂಟೀನ್,- ದೇವೇಗೌಡ ಹೆಸರಲ್ಲಿ ಅಪ್ಪಾಜಿ ಕ್ಯಾಂಟೀನ್ ಆರಂಭಿಸಿದ ಜೆಡಿಎಸ್ ಮುಖಂಡ.
ಬೆಂಗಳೂರು: ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕಾರಣಿಗಳ ಹೆಸರಿನಲ್ಲಿ ಕ್ಯಾಂಟೀನ್ ಆರಂಭಿಸುವ ಪರಿಪಾಠ ಹೆಚ್ಚಾಗುತ್ತಿದ್ದು ಇದೀಗ ಯಡಿಯೂರಪ್ಪ ಅಭಿಮಾನಿಗಳ ಸರದಿ.
ಈಗಾಗಲೇ ಮಂಡ್ಯ ಮಹಾವೀರ್ ವೃತ್ತದಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಹೆಸರಿನಲ್ಲಿ ಜೆಡಿಎಸ್ ಅಭಿಯಾನಿಗಳು ಅಪ್ಪಾಜಿ ಕ್ಯಾಂಟೀನ್, ಅಶೋಕನಗರದಲ್ಲಿ ಮಾಜಿ ಸಂಸದೆ ರಮ್ಯಾ ಹೆಸರಿನಲ್ಲಿ ಕು. ರಮ್ಯಾ ಕ್ಯಾಂಟೀನ್, ಗುತ್ತಲಿನ ಹೊಸಹಳ್ಳಿ ವೃತ್ತದಲ್ಲಿ ಮಹಿಳೆಯರೇ ರವಿಕುಮಾರ್ ಕ್ಯಾಂಟೀನ್ ಕಾಂಗ್ರೆಸ್ ಮುಖಂಡ ರವಿಕುಮಾರ್ ಹೆಸರಿನಲ್ಲಿ ಪ್ರಾರಂಭಿಸಲಾಗಿದ್ದು ಹೊಸಹಳ್ಳಿ ವೃತ್ತದಲ್ಲಿ ಸಿದ್ಧತೆ ನಡೆಸಲಾಗಿದೆ.
ಇವೆಲ್ಲವೂದರ ನಡುವೆ ಮಾಜಿ ಸಿಎಂ ಯಡಿಯೂರಪ್ಪ ಹೆಸರಿನಲ್ಲಿ 2 ಕ್ಯಾಂಟೀನ್ ಆರಂಭಿಸಲು ಚಿಂತನೆ ನಡೆಸಲಾಗಿದ್ದು ಅಭಿಮಾನಿ ಜೀತೇಂದ್ರ 2 ಅಥವಾ 3 ರು.ಗೆ ಊಟ ಕೊಡಲು ನಿರ್ಧರಿಸಲಾಗಿದೆ.
ಮೊದಲ ಹಂತವಾಗಿ ಸುಭಾಷ್‌ನಗರ 1ನೇ ಕ್ರಾಸ್‌ನಲ್ಲಿ ಯಡಿಯೂರಪ್ಪ ಅಭಿಮಾನಿಗಳ ಸಂಘದ ಅಧ್ಯಕ್ಷ ಜೀತೇಂದ್ರ ಎರಡು ಕ್ಯಾಂಟೀನ್ ಆರಂಭಿಸಿದ್ದೇ ಆದಲ್ಲಿ ಮಂಡ್ಯದಲ್ಲಿ ಒಟ್ಟು 6 ಕ್ಯಾಂಟೀನ್ ಮಂಡ್ಯದಲ್ಲಿ ಕಾರ್ಯಾರಂಭವಾಗಲಿವೆ. ಆದರೆ, ಬಿಎಸ್ ವೈ ಕ್ಯಾಂಟೀನ್‌ಗೆ ಪ್ರಚಾರ ಕೊಡಲಾಗಿದೆ ಹೊರತು ಯಾವುದೇ ಸಿದ್ಧತೆಯಾಗಿಲ್ಲ ಎಂದು ಹೇಳಲಾಗಿದೆ.
