ಬಿಜೆಪಿ ಅಧಿಕಾರಕ್ಕೆ ಬಂದರೆ ಸ್ಲಂ ನಿವಾಸಿಗಳಿಗೆ ಮನೆ :ಬಿಎಸ್’ವೈ ಭರವಸೆ

First Published 12, Feb 2018, 8:47 AM IST
BJP Give Home To Slum Peoples
Highlights

ಕಳೆದ 60 ವರ್ಷಗಳಿಂದ ಕೊಳೆಗೇರಿ ನಿವಾಸಿಗಳನ್ನು ಕಾಂಗ್ರೆಸ್ ಪಕ್ಷವು ಕೇವಲ ವೋಟ್ ಬ್ಯಾಂಕ್ ಆಗಿ ಬಳಕೆ ಮಾಡಿಕೊಳ್ಳುತ್ತಿದೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಕೊಳೆಗೇರಿಗಳನ್ನು ನಿರ್ಮೂಲನೆ ಮಾಡಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದರು.

ಬೆಂಗಳೂರು : ಕಳೆದ 60 ವರ್ಷಗಳಿಂದ ಕೊಳೆಗೇರಿ ನಿವಾಸಿಗಳನ್ನು ಕಾಂಗ್ರೆಸ್ ಪಕ್ಷವು ಕೇವಲ ವೋಟ್ ಬ್ಯಾಂಕ್ ಆಗಿ ಬಳಕೆ ಮಾಡಿಕೊಳ್ಳುತ್ತಿದೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಕೊಳೆಗೇರಿಗಳನ್ನು ನಿರ್ಮೂಲನೆ ಮಾಡಲಾಗುವುದು.  ಕೊಳೆಗೇರಿ ಮುಕ್ತವನ್ನಾಗಿ ಮಾಡಿ ಸುಸಜ್ಜಿತ ಮನೆಗಳನ್ನು ನಿರ್ಮಾಣ ಮಾಡಲಾಗುವುದು. ಅಲ್ಲದೇ, ಅವರಿಗೆ ಅಗತ್ಯ ವಾಗಿರುವ ಹಕ್ಕುಪತ್ರಗಳನ್ನು ಕೊಡಿಸಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದರು.

ಬಿಜೆಪಿ ಸ್ಲಂ ಮೋರ್ಚಾ ಹೊರತಂದಿರುವ 2016-17ನೇ ಸಾಲಿನ ಕೊಳಚೆ ಪ್ರದೇಶಗಳ ಸ್ಥಿತಿಗತಿಯ ಸಮೀಕ್ಷಾ ವರದಿ ಸ್ಲಮ್ ದುರ್ಭಾಗ್ಯ ಪುಸ್ತಕವನ್ನು ಭಾನುವಾರ ಬಿಡುಗಡೆ ಮಾಡಿ ಮಾತನಾಡಿದ ಅವರು, ರಾಜ್ಯ ಬಿಜೆಪಿ ಮುಖಂಡರು ಕೊಳಚೆ ಪ್ರದೇಶದ ನಿವಾಸಿಗಳ ಸಮಸ್ಯೆ ಗಳನ್ನು ಆಲಿಸಿ ಅರ್ಥ ಮಾಡಿಕೊಳ್ಳುವ ಸಂಬಂಧ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ವಾಸ್ತವ್ಯ ಮಾಡಲಾಗಿದೆ.

ಕೊಳಚೆ ಪ್ರದೇಶಗಳ ಸಮಸ್ಯೆ ಕುರಿತು ಅಧ್ಯಯನ ನಡೆಸಲಾಗಿದೆ. ಹತ್ತಾರು ಸಮಸ್ಯೆಗಳು ಗೋಚರವಾಗಿವೆ ಎಂದರು. ರಾಜ್ಯದಲ್ಲಿ 2804 ಕೊಳಚೆ ಪ್ರದೇಶಗಳಿದ್ದು, 33 ಲಕ್ಷ ಜನರು ನೆಲೆಸಿದ್ದಾರೆ. 7.46 ಲಕ್ಷ ಕುಟುಂಬಗಳಿರುವುದು ಗೊತ್ತಾಗಿದೆ. ಬೆಂಗಳೂರಲ್ಲಿ 598 ಕೊಳಚೆ ಪ್ರದೇಶಗಳಿವೆ ಎಂದು ಹೇಳಿದ್ದಾರೆ.

loader